ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ದರ ಏರಿಕೆ ಅಗತ್ಯವಾಗಿದೆ:ಸೋನಿಯಾ ಗಾಂಧಿ (Sonia Gandhi | Fuel price | Hike)
Bookmark and Share Feedback Print
 
PTI
ಸಂಸತ್ತು ಅಧಿವೇಶನದಲ್ಲಿ ವಿರೋಧ ಪಕ್ಷಗಳು ದರ ಏರಿಕೆ ವಿರೋಧಿಸಿ ಕೋಲಾಹಲ ಸೃಷ್ಟಿಸಿದ ಮಧ್ಯೆಯು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ,ಸಾಮಾಜಿಕ ಕ್ಷೇತ್ರಗಳ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಕ್ರೂಢೀಕರಣಕ್ಕಾಗಿ ಇಂಧನ ದರ ಏರಿಕೆ ಅಗತ್ಯವಾಗಿದೆ ಎಂದು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ದರ ಏರಿಕೆ ಎಂದಿಗೂ ಸಂತಸ ತರುವ ವಿಷಯವಲ್ಲ. ಆದರೆ, ಸಾಮಾಜಿಕ ಕ್ಷೇತ್ರದ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಹರಿವು ಹೆಚ್ಚಿಸುವುದು ಸೇರಿದಂತೆ ಇತರ ಕಾರಣಗಳಿಂದಾಗಿ ಇಂಧನ ದರಗಳಲ್ಲಿ ಏರಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖವಾಣಿಯಾದ ಕಾಂಗ್ರೆಸ್ ಸಂದೇಶ್ ಪತ್ರಿಕೆಗೆ ನೀಡಿದ ಸಂದರ್ಶನಲ್ಲಿ ಸೋನಿಯಾ ತಿಳಿಸಿದ್ದಾರೆ.

ಎನ್‌ಡಿಎ ಸರಕಾರ ಐದು ವರ್ಷಗಳ ಅವಧಿಗೆ ಅಧಿಕಾರದಲ್ಲಿದ್ದಾಗ, 28ರಿಂದ 31 ಬಾರಿ ಇಂಧನ ದರಗಳ ಏರಿಕೆಯನ್ನು ಘೋಷಿಸಿತ್ತು. ಆದರೆ ಯುಪಿಎ ಸರಕಾರ ಒಂಬತ್ತು ವರ್ಷಗಳ ಅವಧಿಯಲ್ಲಿ ಕೇವಲ ಆರು ಬಾರಿ ಮಾತ್ರ ಇಂಧನ ದರಗಳಲ್ಲಿ ಏರಿಕೆ ಘೋಷಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಎನ್‌ಡಿಎ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಯುಪಿಎ ಸರಕಾರ, ತನ್ನ ಅಧಿಕಾರವಧಿಯಲ್ಲಿ ಕೇವಲ ಜನಸಾಮಾನ್ಯರ ಏಳಿಗೆಗಾಗಿ ಹಗಲಿರಳು ಕಾರ್ಯನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಏರಿಕೆಯಿಂದಾಗಿ, ಇಂಧನ ದರಗಳಲ್ಲಿ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಸರಕಾರ ದರ ಏರಿಕೆ ಮಾಡುವ ಅನಿವಾರ್ಯತೆಯ ಬಗ್ಗೆ, ದೇಶದ ಜನತೆಗೆ ಸಂದೇಶ ರವಾನಿಸಲು ಪ್ರಯತ್ನಿಸಬೇಕು ಎಂದು ಸೋನಿಯಾ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ..
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋನಿಯಾ ಗಾಂಧಿ, ಇಂಧನ ದರ, ಏರಿಕೆ