ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ ಕಂಪೆನಿಯಿಂದ ಕಾರು ದರಗಳಲ್ಲಿ ಏರಿಕೆ ಘೋಷಣೆ (Maruti Suzuki India | Prices | Alto | Models)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ಅಲ್ಟೋ ಮಾಡೆಲ್ ಕಾರು ಹೊರತುಪಡಿಸಿ, ಇತರ ಮಾಡೆಲ್‌ಗಳ ಕಾರುಗಳ ದರಗಳಲ್ಲಿ 7,500 ರೂಪಾಯಿಗಳವರೆಗೆ ಏರಿಕೆ ಘೋಷಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಚ್ಚಾ ವಸ್ತುಗಳ ದರ ಏರಿಕೆಯ ಹಿನ್ನೆಲೆಯಲ್ಲಿ,ಕಾರು ದರಗಳಲ್ಲಿ ಏರಿಕೆ ಮಾಡಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಗ್ರಾಹಕರ ಜನಪ್ರಿಯವಾದ ಅಲ್ಟೋ ಮಾಡೆಲ್‌ ಕಾರಿನ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರ ಮಾಡೆಲ್‌ಗಳ ಕಾರು ದರಗಳಲ್ಲಿ (ದೆಹಲಿ, ಶೋರೂಂ ಹೊರತುಪಡಿಸಿ)2,000 ರೂಪಾಯಿಗಳಿಂದ 7,500 ರೂಪಾಯಿಗಳವರೆಗೆ ದರ ಏರಿಕೆ ಘೋಷಿಸಲಾಗಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ ತಿಂಗಳ ಅವಧಿಯ ನಿವ್ವಳ ಮಾರಾಟದಲ್ಲಿ ಶೇ.33.45ರಷ್ಟು ಏರಿಕೆಯಾಗಿ 90,114 ವಾಹನಗಳ ಮಾರಾಟದ ಗುರಿಯನ್ನು ತಲುಪಿದ ನಂತಚರ ಕಂಪೆನಿ ಕಾರು ದರಗಳಲ್ಲಿ ಏರಿಕೆಯನ್ನು ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ