ವರ್ಷಾಂತ್ಯಕ್ಕೆ ಶೇ.25ರಷ್ಟು ಸಾಲ ಕ್ಷೇತ್ರ ವೃದ್ಧಿ:ಎಚ್‌ಡಿಎಫ್‌ಸಿ
ನವದೆಹಲಿ, ಮಂಗಳವಾರ, 3 ಆಗಸ್ಟ್ 2010( 13:07 IST )
ಗೃಹಸಾಲ ವಿತರಣೆಯಲ್ಲಿ ಅಗ್ರಸ್ಥಾನದಲ್ಲಿರುವ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ,ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಸಾಲ ನೀಡಿಕೆ ವಹಿವಾಟಿನಲ್ಲಿ ಶೇ.25ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
2010-11ರ ಆರ್ಥಿಕ ವರ್ಷಾಂತ್ಯಕ್ಕೆ ಸಾಲ ನೀಡಿಕೆ ವಹಿವಾಟಿನಲ್ಲಿ ಶೇ.22-25 ರಷ್ಟು ಚೇತರಿಕೆಯಾಗುವ ನಿರೀಕ್ಷೆಗಳಿವೆ ಎಂದು ಎಚ್‌ಡಿಎಫ್‌ಸಿ ವ್ಯವಸ್ಥಾಪಕ ನಿರ್ದೆಶಕ ರೇಣು ಸೂದ್ ಕರ್ನಾಡ್ ತಿಳಿಸಿದ್ದಾರೆ.
2009-10ರ ಆರ್ಥಿಕ ವರ್ಷದಲ್ಲಿ 60,611ಕೋಟಿ ರೂಪಾಯಿ ಗೃಹಸಾಲ ವಿತರಿಸಿತ್ತು ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಗೃಹಸಾಲ ಕ್ಷೇತ್ರದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.ಕೆಲ ನಗರಗಳಲ್ಲಿ ಸ್ಥಿರಾಸ್ತಿ ದರಗಳಲ್ಲಿ ಏರಿಕೆಯಾಗಿರುವುದು ಕಳವಳ ಮೂಡಿಸಿದೆ ಎಂದು ಕರ್ನಾಡ್ ಆತಂಕ ವ್ಯಕ್ತಪಡಿಸಿದ್ದಾರೆ.
ಜೂನ್ 30ಕ್ಕೆ ಮೊದಲನೇ ತ್ರೈಮಾಸಿಕ ಅಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.23ರಷ್ಟು ಏರಿಕೆಯಾಗಿ 694.59 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 564.92 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ಬ್ಯಾಂಕ್‌ನ ಒಟ್ಟು ಆದಾಯ ಮೂರನೇ ತ್ರೈಮಾಸಿಕ ಅವಧಿಯಲ್ಲಿ 2,802 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷದ ಅವಧಿಯಲ್ಲಿ 2,849 ಕೋಟಿ ರೂಪಾಯಿಗಳಾಗಿತ್ತು ಎಂದು ಎಚ್‌ಡಿಎಫ್‌ಸಿ ವ್ಯವಸ್ಥಾಪಕ ನಿರ್ದೆಶಕ ರೇಣು ಸೂದ್ ಕರ್ನಾಡ್ ತಿಳಿಸಿದ್ದಾರೆ.