ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆ, ಗೃಸಚಿವಾಲಯದಿಂದ ಅಪರಾಧ ಮತ್ತು ಅಪರಾಧ ಪತ್ತೆ ಸಂಪರ್ಕ ವ್ಯವಸ್ಥೆಯ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಗುತ್ತಿಗೆಯನ್ನು ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಅಪರಾಧಿಗಳ ಪತ್ತೆಗಾಗಿ ಸೂಕ್ತ ವ್ಯವಸ್ಥೆಯನ್ನು ಬಲಪಡಿಸಲು, ಕ್ರಿಮಿನಲ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್(ಸಿಸಿಟಿಎನ್‌ಎಸ್) ಅತ್ಯಾಧುನಿಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವಂತೆ ಗೃಹಸಚಿವಾಲಯ ಬೇಡಿಕೆ ಸಲ್ಲಿಸಿದೆ.
ದೇಶದ ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ 14,000 ಪೊಲೀಸ್ ಠಾಣೆಗಳು ಹಾಗೂ 6,000 ಪೊಲೀಸ್ ಕೇಂದ್ರ ಕಚೇರಿಗಳಲ್ಲಿ ಅಪರಾಧಿಗಳ ಅಪರಾಧದ ಸಂಪೂರ್ಣ ವಿವರಗಳು ಅಭಿವೃದ್ಧಿಪಡಿಸುತ್ತಿರುವ ಸಾಫ್ಟ್‌ವೇರ್‌ನಲ್ಲಿ ಲಭ್ಯವಾಗಲಿದೆ.
ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಅಪರಾಧಿಗಳ ಸಂಪೂರ್ಣ ವಿವರಗಳ ಮಾಹಿತಿಯನ್ನು ಸಂಗ್ರಹಿಸಿ, ಅಳವಡಿಸಲಾಗುವುದರಿಂದ, ದೇಶದ ಎಲ್ಲಾ ಭಾಗದಲ್ಲಿ ಅಪರಾಧಿಗಳ ಸಂಪೂರ್ಣ ವಿವರಗಳು ದಾಖಲಾಗಲಿವೆ ಎಂದು ವಿಪ್ರೋ ಅಧಿಕಾರಿಗಳು ತಿಳಿಸಿದ್ದಾರೆ.