ಏಷ್ಯಾ ಶೇರುಪೇಟೆಗಳ ಚೇತರಿಕೆ ಹಾಗೂ ದುರ್ಬಲ ಡಾಲರ್ ವಹಿವಾಟಿನಿಂದಾಗಿ, ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತೈಲ ದರ, ಮೂರು ತಿಂಗಳ ಗರಿಷ್ಠ ಏರಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 81 ಡಾಲರ್‌ಗಳಿಗೆ ಏರಿಕೆಯಾಗಿದೆ.
ಕಳೆದ ವಾರಕ್ಕೆ ಹೋಲಿಸಿದಲ್ಲಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿ, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 9 ಸೆಂಟ್ಸ್‌ಗಳ ಏರಿಕೆ ಕಂಡು 81.43 ಡಾಲರ್‌ಗಳಿಗೆ ತಲುಪಿದೆ.
ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಉತ್ಪಾದನಾ ಕ್ಷೇತ್ರದ ಚೇತರಿಕೆಯ ಫಲಿತಾಂಶಗಳಿಂದಾಗಿ, ಡೊ ಜೊನ್ಸ್ ಕೈಗಾರಿಕೆ ಅಭಿವೃದ್ಧಿ ಸರಾಸರಿಯಲ್ಲಿ ಶೇ.2ರಷ್ಟು ಏರಿಕೆ ಕಂಡಿದೆ.ಏಷ್ಯಾ ಶೇರುಪೇಟೆಗಳು ಸಂಪೂರ್ಣವಾಗಿ ಚೇತರಿಸಿಕೊಂಡಿವೆ.
ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ದುರ್ಬಲ ವಹಿವಾಟಿನಿಂದಾಗಿ,ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಗಳ ಡೀಲರ್‌ಗಳು ತಿಳಿಸಿದ್ದಾರೆ.