ಜಾಗತಿಕ ದುರ್ಬಲ ವಹಿವಾಟಿನ ಮಧ್ಯೆಯು ಲಾಭಾದಾಯಕ ಮಾರಾಟದಲ್ಲಿ ತೊಡಗಿದ್ದರಿಂದ,ಚಿನ್ನದ ದರದಲ್ಲಿ 15 ರೂಪಾಯಿಗಳಿಗೆ ಇಳಿಕೆಯಾಗಿ, ಪ್ರತಿ 10ಗ್ರಾಂಗೆ 18,125 ರೂಪಾಯಿಗಳಿಗೆ ತಲುಪಿದೆ.
ಏತನ್ಮದ್ಯೆ, ನಾಣ್ಯಗಳ ಉತ್ಪಾದಕರು ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ,ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 300 ರೂಪಾಯಿಗಳ ಏರಿಕೆಯಾಗಿ 29,300 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಮುಂಬರುವ ದಿನಗಳಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಕುಸಿತವಾಗುವ ಹಿನ್ನೆಲೆಯಲ್ಲಿ, ಚಿನ್ನದ ಸಂಗ್ರಹಕಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1.30 ಡಾಲರ್‌ಗಳ ಏರಿಕೆಯಾಗಿ 1,180.70 ಡಾಲರ್‌ಗಳಿಗೆ ತಲುಪಿದೆ.