ಜರ್ಮನಿ ಮೂಲದ ಕಾರು ತಯಾರಿಕೆ ಸಂಸ್ಥೆ ವೊಕ್ಸ್‌ವಾಗೆನ್, ಜುಲೈ ತಿಂಗಳ ಅವಧಿಯಲ್ಲಿ 2,597 ವಾಹನಗಳನ್ನು ಮಾರಾಟ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮಾಸಾಂತ್ಯದ ಆಧಾರದ ಹಿನ್ನೆಲೆಯಲ್ಲಿ, ವೊಕ್ಸ್‌ವಾಗೆನ್‌ನ ಜೆಟ್ಟಾ ಮಾಡೆಲ್ ಕಾರುಗಳ ಮಾರಾಟ ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದಲ್ಲಿ ಶೇ.36ರಷ್ಟು ಹೆಚ್ಚಳವಾಗಿದ್ದು, ಪಸ್ಸಾಟ್ ಮಾಡೆಲ್ ಕಾರಿನ ಮಾರಾಟದಲ್ಲಿ ಶೇ.67ರಷ್ಟು ಏರಿಕೆಯಾಗಿದೆ.
ವೊಕ್ಸ್‌ವಾಗೆನ್‌ನ ಪ್ರಮುಖ ಮಾಡೆಲ್ ಕಾರು ಬೀಟ್ಲೆ ,ಗ್ರಾಹಕರ ಆಕರ್ಷಣೆಗೆ ಪಾತ್ರವಾಗಿದ್ದು, 301 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಜುಲೈ ತಿಂಗಳ ಅವಧಿಯಲ್ಲಿ ಕೇವಲ 69 ಕಾರುಗಳನ್ನು ಮಾರಾಟ ಮಾಡಲಾಗಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೊಕ್ಸ್‌ವಾಗೆನ್ ನೂತನ ನ್ಯೂಪೋಲೊ ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದೇಶಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ರಾಹಕರಿಂದ ಕಾರು ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ನೂತನವಾಗಿ ಬಿಡುಗಡೆ ಮಾಡಲಾದ ನ್ಯೂ ಪೋಲೊ ಮಾಡೆಲ್ ಕಾರು,ಪ್ರಸಕ್ತ ತಿಂಗಳ ಅವಧಿಯಲ್ಲಿ 6,618 ಕಾರುಗಳನ್ನು ಮಾರಾಟ ಮಾಡಲಾಗಿದೆ.
ವೊಕ್ಸ್‌ವಾಗೆನ್ ಕಂಪೆನಿ, ಕೊನೆಯ ತ್ರೈಮಾಸಿಕ ಅವಧಿಯಲ್ಲಿ 'ವೆಂಟೊ' ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.