ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ (Rupee | Dollar | US currency | Importers | Sensex)
Bookmark and Share Feedback Print
 
ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 12 ಪೈಸೆ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 8 ಪೈಸೆ ಏರಿಕೆ ಕಂಡು 46.16/17 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 12 ಪೈಸೆ ಕುಸಿತವಾಗಿ 46.28 ರೂಪಾಯಿಗಳಿಗೆ ತಲುಪಿದೆ.

ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಶೇರುಪೇಟೆಯ ಚೇತರಿಕೆಯ ವಹಿವಾಟಿನಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಣಧ್ಯೆ,ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 57.28 ಪಾಯಿಂಟ್‌ಗಳಿಗೆ ಏರಿಕೆ ಕಂಡು 18,172.11 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ