ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದ್ವಿಚಕ್ರ ವಾಹನ ಮಾರುಕಟ್ಟೆಯತ್ತ ಮಹೀಂದ್ರಾ ಚಿತ್ತ (M&M | Motor-cycle | Market | Scooters)
Bookmark and Share Feedback Print
 
ಭಾರಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆಂಡ್ ಮಹೀಂದ್ರಾ,ಕೇವಲ 10 ತಿಂಗಳ ಅವಧಿಯಲ್ಲಿ 1ಲಕ್ಷ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು,ವರ್ಷಾಂತ್ಯಕ್ಕೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಲಕ್ಷ ಸ್ಕೂಟರ್‌ಗಳನ್ನು 18 ತಿಂಗಳ ಅವಧಿಯಲ್ಲಿ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿತ್ತು. ಆದರೆ ಕೇವಲ 10 ತಿಂಗಳಲ್ಲಿ ಗುರಿಯನ್ನು ಸಾಧಿಸಲಾಗಿದೆ.ವರ್ಷಾಂತ್ಯಕ್ಕೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಮಹೀಂದ್ರಾ ದ್ವಿಚಕ್ರ ವಾಹನ ವಿಭಾಗದ ಅಧ್ಯಕ್ಷ ಅನೂಪ್ ಮಾಥುರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಕೂಟರ್ ತಯಾರಿಸಿದ ಘಟಕದಲ್ಲಿ ಅತ್ಯಾಧುನಿಕ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ತೊಡಗಲಾಗಿದೆ. ವರ್ಷಾಂತ್ಯಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಇಟಲಿ ಮೂಲದ ಇಂಜಿನ್ ಒಳಗೊಂಡಿರುವ ವಿಶಿಷ್ಠ ವಿನ್ಯಾಸದ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಕಂಪೆನಿಯ ಪಿಥಾಂಪುರ್ ಘಟಕ ವರ್ಷಕ್ಕೆ ಐದರಿಂದ ಆರು ಲಕ್ಷ ಸ್ಕೂಟರ್‌‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ ಎಂದು ಮಾಥುರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ