ಖಾಸಗಿ ಮಿಲ್ ಮಾಲೀಕರ ಗೋಧಿ ಅಮುದು ವಹಿವಾಟಿಗೆ ಸರಕಾರ, ಶೀಘ್ರದಲ್ಲಿ ನಿಷೇಧ ಹೇರುವ ಸಾಧ್ಯತೆಗಳಿಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೆ.ವಿ.ಥಾಮಸ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಖಾಸಗಿ ಮಿಲ್‌ಗಳ ಮಾಲೀಕರು ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಪ್ರತಿ ಟನ್‌ಗೆ 13,874 ರೂಪಾಯಿಗಳ ದರದಲ್ಲಿ 46,174 ಟನ್‌ಗಳಷ್ಟು ಗೋಧಿಯನ್ನು ಅಮುದು ಮಾಡಿಕೊಂಡಿದ್ದಾರೆ ಎಂದು ಸಚಿವ ಥಾಮಸ್ ಸಂಸತ್ತಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಭಾರತದಲ್ಲಿರುವ ಖಾಸಗಿ ಮಿಲ್‌ಗಳು, ವಿದೇಶಿಗಳಿಂದ ಗೋಧಿಯನ್ನು ಅಮುದು ಮಾಡಿಕೊಳ್ಳುತ್ತಿದ್ದು, ವಿಸೇಷವಾಗಿ ಆಸ್ಟ್ರೇಲಿಯಾ ಕೇಂದ್ರ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಉತ್ತರ ಭಾರತದ ಪಂಜಾಬ್ ಮತ್ತು ಹರಿಯಾಣಾದಿಂದ ದಕ್ಷಿಣ ಭಾರತಕ್ಕೆ ಗೋಧಿಯ ಸರಕು ಸಾಗಾಣೆ ದರದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಅಮುದು ವಹಿವಾಟಿನಿಂದ ಕಡಿಮೆ ದರದಲ್ಲಿ ಖರೀದಿಸಬಹುದು ಎನ್ನುವ ವಾಸ್ತವ ಸಂಗತಿಯಿಂದಾಗಿ ಅಮುದು ವಹಿವಾಟಿನಲ್ಲಿ ಹೆಚ್ಚಳವಾಗಿದೆ ಎಂದು ಸಚಿವ ಥಾಮಸ್ ಸಂಸತ್ತಿಗೆ ವಿವರಣೆ ನೀಡಿದ್ದಾರೆ.