ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ಅಲ್ಟೋ ಮಾದರಿಯ ನೂತನ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು,ದರವನ್ನು 3.03 ಲಕ್ಷ ರೂಪಾಯಿಗಳಿಂದ 3.16 ಲಕ್ಷ ರೂಪಾಯಿಗಳಿಗೆ(ಶೋರೂಂ ಹೊರತುಪಡಿಸಿ) ನಿಗದಿಪಡಿಸಿದೆ.
ನೂತನ ಮಾಡೆಲ್ ಅವೃತ್ತಿಯ ಕಾರಿಗೆ ಅಲ್ಟೋ-ಕೆ10 ಎಂದು ಹೆಸರಿಸಲಾಗಿದ್ದು, ಒಂದು ಲೀಟರ್‌ನ ಕೆ-ಸೀರಿಸ್ ಇಂಜಿನ್ ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನೂತನ ಅಲ್ಟೋ ಮಾದರಿಯ ಕಾರು ಇಂಧನ ಉಳಿತಾಯ ಸಾಮರ್ಥ್ಯ ಹಾಗೂ ಆಕರ್ಷಕ ದರಗಳಿಂದಾಗಿ ಭಾರತದಲ್ಲಿ ಬಹುಬೇಗ ಜನಪ್ರಿಯವಾಗಲಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಂಜೊ ನಕಾನಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತುತವಿರುವ ಅಲ್ಟೋ ಕಾರು ಪ್ರತಿ ತಿಂಗಳಿಗ 20,000 ಕಾರುಗಳ ಮಾರಾಟವಾಗುತ್ತಿದ್ದು, ದೇಶದ ಕಾರುಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ನೂತನ ಮಾಡೆಲ್ ಅಲ್ಟೋ-ಕೆ10 ಮಾಡೆಲ್ ಕಾರು ಮತ್ತಷ್ಟು ಗ್ರಾಹಕರನ್ನು ಸೆಳೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನೂತನ ಮಾಡೆಲ್ ಅಲ್ಟೋ-ಕೆ10 ಮಾಡೆಲ್ ಕಾರು, ಪ್ರತಿ ಲೀಟರ್‌ಗೆ 20.2 ಕಿ.ಮಿ.ಮೈಲೇಜ್ ನೀಡಲಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ಮೂಲಗಳು ತಿಳಿಸಿವೆ.