ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದರ ನಿಯಂತ್ರಣಕ್ಕಾಗಿ ಸರ್ವಪಕ್ಷಗಳ ಬೆಂಬಲ ಅಗತ್ಯ:ಪ್ರಣಬ್ (Pranab Mukherjee | GST | Domestic market | Control prices)
Bookmark and Share Feedback Print
 
ಕೇಂದ್ರ ಮತ್ತಪ ರಾಜ್ಯ ಸರಕಾರಗಳು ಪ್ರವರ್ತನಾ ಶಕ್ತಿಯಾಗಿ ಸರಕು ಸಾಗಾಣೆ ಮತ್ತು ಸೇವಾ ತೆರಿಗೆಗಳನ್ನು ವೇಗವಾಗಿ ಜಾರಿಗೆ ತಂದಲ್ಲಿ ದೇಶಿಯ ಮಾರುಕಟ್ಟೆಗಳ ದರ ಏರಿಕೆಯ ತೊಳಲಾಟವನ್ನು ನಿಯಂತ್ರಿಸಬಹುದು ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಸ್ಟ್ಯಾಂಡಿಂಗ್ ಕಮಿಟಿಯ ಪರಿಶೀಲನೆ ನಂತರ ಮಸೂದೆಯನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲಾಗುವುದು.ದೇಶದ 15 ರಾಜ್ಯಗಳು ಮಸೂದೆಯನ್ನು ಅನುಮೋದಿಸಬೇಕಾಗಿದೆ. ಇಲ್ಲವಾದಲ್ಲಿ ಮತ್ತಷ್ಟು ವಿಳಂಬವಾಗಲಿದೆ. ಸಂಪೂರ್ಣ ಸಂಸತ್ತಿನ ಬೆಂಬಲ ಅಗತ್ಯವಾಗಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.

ಪೆಟ್ರೋಲಿಯಂ ಕ್ಷೇತ್ರ ಸರಕಾರಕ್ಕೆ ಅತಿ ಹೆಚ್ಚು ಶೇ.34ರಷ್ಟು ಆದಾಯ ತರುವ ಕ್ಷೇತ್ರವಾಗಿದೆ. ಕಳೆದ 2009-10ರ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ 72,000 ಕೋಟಿ ರೂಪಾಯಿಗಳ ಆದಾಯವಾಗಿದೆ. ಪೆಟ್ರೋಲ್ ದರವನ್ನು ಇಳಿಕೆ ಮಾಡುವುದು ಅಗತ್ಯವಾಗಿದೆ ಎಂದು ನನಗೆ ತಿಳಿದಿದೆ. ಆದರೆ ದರ ಇಳಿಕೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಏತನ್ಮದ್ಯೆ, ಮುಂಬರುವ ಏಪ್ರಿಲ್ 1,2011ರಿಂದ ಜಾರಿಗೆ ಬರಲಿರುವ ಸರಕು ಸಾಗಾಣೆ ಮತ್ತು ಸೇವಾ ಪರೋಕ್ಷ ತೆರಿಗೆಗಳ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಣಕಾಸು ಸಚಿವರು ಚರ್ಚೆ ನಡೆಸುತ್ತಿದ್ದಾರೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ