ಬ್ಲಾಕ್‌ಬೆರ್ರಿ ಸೇವೆಗಳನ್ನು ಮುಂಬರುವ ಶುಕ್ರವಾರದಿಂದ ಸ್ಥಗಿತಗೊಳಿಸಲಾಗುತ್ತಿದೆ ಎಂದು ಸೌದಿ ಅರೇಬಿಯಾದ ಟೆಲಿಕಾಂ ನಿಯಂತ್ರಕ ಸಂಸ್ಥೆ ಮೂಲಗಳು ತಿಳಿಸಿವೆ.
ಕಮ್ಯೂನಿಕೇಶನ್ಸ್ ಆಂಡ್ ಇನ್‌ಫಾರ್ಮೇಶನ್ ಟೆಕ್ನಾಲಾಜಿ ಕಮಿಷನ್ (ಸಿಐಟಿಸಿ)ಪ್ರಕಾರ, ಬ್ಲ್ಯಾಕ್ ಬೆರ್ರಿ ನೇಡುತ್ತಿರುವ ಸೇವೆಗಳು ಟ್ರಾಯ್ ನಿಗದಿಪಡಿಸಿದ ನಿಯಮಗಳು ಹಾಗೂ ಅನುಮತಿ ಷರತ್ತುಗಳು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ಲ್ಯಾಕ್ ಬೆರ್ರಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸ್ಥಳೀಯ ಟೆಲಿಕಾಂ ಕಂಪೆನಿಗಳನ್ನು ಆದೇಶಿಸಲಾಗಿದ್ದು, ಶುಕ್ರವಾರದಿಂದ ಜಾರಿಗೆ ಬರಲಿದೆ.ದೇಶದ ಟೆಲಿಕಾಂ ನಿಯಂತ್ರಕ ಸಂಸ್ಥೆಯ ನಿಯಮಗಳಿಗೆ ಬದ್ಧವಾದಲ್ಲಿ ಮುಂಬರುವ ದಿನಗಳಲ್ಲಿ ಮತ್ತೆ ಸೇವೆಯನ್ನು ಮುಂದುವರಿಸಬಹುದು ಎಂದು ಬ್ಲ್ಯಾಕ್ ಬೆರ್ರಿ ಉತ್ಪಾದಕ ಸಂಸ್ಥೆ ರಿಸರ್ಚ್ ಇನ್ ಮೋಶನ್‌ಗೆ ಮಾಹಿತಿಯನ್ನು ರವಾನಿಸಲಾಗಿದೆ.
ಕಳೆದ ಒಂದು ವರ್ಷಗಳ ಹಿಂದೆ ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ನಿಯಮಗಳನ್ನು ಪಾಲಿಸುವಂತೆ ಆದೇಶಿಸಲಾಗಿತ್ತು. ಆದರೆ,ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿದ್ದರಿಂದ, ಬ್ಲ್ಯಾಕ್ ಬೆರ್ರಿ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.