ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೇಘಾಲಯದಲ್ಲಿ 585 ಮೆವ್ಯಾ ಯೋಜನೆಗೆ ಕೇಂದ್ರ ಅಸ್ತು
(Meghalaya | Power projects | Union Power Ministry | Garo Hills | Mawphu)
ನಾರ್ಥ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೋರೇಶನ್‌ನೊಂದಿಗೆ ಎರಡು 585 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಯೋಜನೆ ಮೇಘಾಲಯ ಮಾಡಿಕೊಂಡ ಒಪ್ಪಂದಕ್ಕೆ ಕೇಂದ್ರದ ವಿದ್ಯುತ್ ಸಚಿವಾಲಯ ಅನುಮತಿ ನೀಡಿದೆ.
ಗಾರೊ ಹಿಲ್ಸ್‌ನಲ್ಲಿ 500 ಮೆವ್ಯಾ ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕ ಮತ್ತು ಮಾವ್‌ಫು ಪ್ರದೇಶದಲ್ಲಿ 85ಮೆವ್ಯಾ ಜಲ ವಿದ್ಯುತ್ ಯೋಜನೆಗೆ ಅನುಮತಿ ದೊರೆತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮೇಘಾಲಯ ಸರಕಾರ ಒಪ್ಪಂದಕ್ಕೆ ಅನುಮತಿ ನೀಡಿದ್ದು. ಶೀಘ್ರದಲ್ಲಿ ಹಸ್ತಾಕ್ಷರ ಹಾಕುವ ನಿರೀಕ್ಷೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಘಟಕ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿ ಹಾಗೂ ನಿಗದಿತ ಅವಧಿಗೆ ವಿದ್ಯುತ್ ಘಟಕಗಳ ಕಾರ್ಯಾರಂಭ ಕುರಿತಂತೆ ಯೋಜನೆ ಮೇಲ್ವಿಚಾರಣೆ ಸಮಿತಿ ಪರಿಶೀಲನೆ ನಡೆಸಲಿದ್ದು,ಶೇ.80 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಾಗಿರಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.