ಜಾಗತಿಕ ಸ್ಥಿರವಹಿವಾಟಿನ ಮಧ್ಯೆ ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಚಿನ್ನದ ಖರೀದಿಯಲ್ಲಿ ಗಣನೀಯ ಏರಿಕೆಯಾಗಿದ್ದು, ಚಿನ್ನದ ದರ ಪ್ರತಿ 10ಗ್ರಾಂಗೆ 175 ರೂಪಾಯಿಗಳಿಗೆ ಏರಿಕೆಯಾಗಿ 18,300 ರೂಪಾಯಿಗಳಿಗೆ ತಲುಪಿದೆ.
ನಾಣ್ಯಗಳ ತಯಾರಕರಿಂದ ಹಾಗೂ ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯಿಂದಾಗಿ ಬೆಳ್ಳಿಯ ದರ ಪ್ರತಿ ಕೆಜಿಗೆ 200 ರೂಪಾಯಿಗಳಿಗೆ ಏರಿಕೆಯಾಗಿ 29,500 ರೂಪಾಯಿಗಳಿಗೆ ತಲುಪಿದೆ.
ಚಿನ್ನದ ವಹಿವಾಟಿನಲ್ಲಿ ಕೆಲ ನಿಯಮಗಳನ್ನು ಸಡಿಲಿಸಲು ಚೀನಾ ನಿರ್ಧರಿಸಿರುವುದು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ವಹಿವಾಟು ಚೇತರಿಕೆಯಿಂದಾಗಿ, ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ, ಪ್ರತಿ ಔನ್ಸ್‌ಗೆ ಶೇ.0.8ರಷ್ಟು ಏರಿಕೆಯಾಗಿದ್ದು, 1,195.05 ಡಾಲರ್‌ಗಳಿಗೆ ತಲುಪಿದೆ.