ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಿಎಸ್‌ಟಿ ಮಸೂದೆ ತಿದ್ದುಪಡಿಗೆ ಬೆಂಬಲವಿಲ್ಲ: ಗುಪ್ತಾ (GST | Constitutional amendment bill | Pranab Mukherjee)
Bookmark and Share Feedback Print
 
ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿದ ಸರಕು ಸಾಗಾಣೆ ನೂತನ ತೆರಿಗೆ ವಿಧಾನಕ್ಕೆ ರಾಜ್ಯ ಸರಕಾರಗಳು ವಿರೋಧ ವ್ಯಕ್ತಪಡಿಸಿ,ಮಸೂದೆ ಜಾರಿಗೆ ತರುವುದರಿಂದ ರಾಜ್ಯದ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ವಿತ್ತಸಚಿವರು ಹಸ್ತಕ್ಷೇಪ ಮಾಡುವ ಅಧಿಕಾರವನ್ನು ನೀಡಿದಂತಾಗುತ್ತದೆ ಎಂದು ಆರೋಪಿಸಿವೆ.

ಮುಂಬರುವ ಆರ್ಥಿಕ ವರ್ಷದಿಂದ ನೂತನ ಪರೋಕ್ಷ ತೆರಿಗೆ ಪದ್ದತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದ್ದು, ದೇಶದ ಎಲ್ಲಾ ರಾಜ್ಯಗಳು ಬೆಂಬಲ ನೀಡಬೇಕು ಎಂದು ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಮನವಿ ಮಾಡಿದ್ದರು.

ಸರಕು ಸಾಗಾಣೆ ಪರೋಕ್ಷ ತೆರಿಗೆ ಮಸೂದೆಗೆ ರಾಜ್ಯ ಸರಕಾರಗಳು ಬೆಂಬಲ ನೀಡುವುದಿಲ್ಲ.ಮಸೂದೆಗೆ ಕೆಲ ತಿದ್ದುಪಡಿಗಳ ಅಗತ್ಯವಿದೆ ಎಂದು ಎಲ್ಲಾ ರಾಜ್ಯಗಳ ವಿತ್ತಸಚಿವರ ಸಮಿತಿಯ ಮುಖ್ಯಸ್ಥ ಆಸಿಮ್ ದಾಸ್‌ಗುಪ್ತಾ ಹೇಳಿದ್ದಾರೆ.

ಮಸೂದೆಯನ್ನು ಜಾರಿಗೆ ತರುವುದರಿಂದ ರಾಜ್ಯಗಳ ವಿಷಯಗಳಿಗೆ ಸಬಂಧಿಸಿದಂತೆ ಕೇಂದ್ರ ಸರಕಾರದ ಅನಗತ್ಯ ಹಸ್ತಕ್ಷೇಪದಲ್ಲಿ ಹೆಚ್ಚಳವಾಗಿ, ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ