ಆಲೂಗಡ್ಡೆ, ಈರುಳ್ಳಿ ದರಗಳು ಸೇರಿದಂತೆ ಇತರ ತರಕಾರಿ ದರಗಳ ಇಳಿಕೆಯಿಂದಾಗಿ,ಜುಲೈ24ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.9.53ಕ್ಕೆ ಇಳಿಕೆಯಾಗಿದೆ.
ಜುಲೈ 17ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.9.67ಕ್ಕೆ ಇಳಿಕೆಯಾಗಿ, ಒಂದಂಕಿಗೆ ತಲುಪಿತ್ತು.ಇದೀಗ ಸತತ ಎರಡನೇ ವಾರವೂ ಕೂಡಾ ಒಂದಂಕಿಗೆ ಮುಂದುವರಿದಿದೆ.
ವಾರ್ಷಿಕ ಆಧಾರದಲ್ಲಿ, ಆಲೂಗಡ್ಡೆ ದರ ಶೇ.41.14ರಷ್ಟು ಇಳಿಕೆ ಕಂಡಿದೆ.ಏತನ್ಮಧ್ಯೆ, ಒಟ್ಟಾರೆ ತರಕಾರಿ ದರಗಳಲ್ಲಿ ಶೇ.17.32ರಷ್ಟು ಇಳಿಕೆಯಾಗಿದ್ದು, ಈರುಳ್ಳಿ ದರದಲ್ಲಿ ಶೇ.4.06ರಷ್ಟು ಕುಸಿತ ಕಂಡಿದೆ.
ಏತನ್ಮದ್ಯೆ ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.6.87ರಷ್ಟು ಏರಿಕೆಯಾಗಿದೆ. ಭತ್ತ, ಗೋಧಿ ದರಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಅದಿಕಾರಿಗಳು ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಪ್ರಸ್ತಾಪಿಸಿದ್ದಾರೆ.