ಭಾರ್ತಿ ಏರ್‌ಟೆಲ್, ವೋಡಾಫೋನ್, ರಿಲಯನ್ಸ್ ಕಮ್ಯೂನಿಕೇಶನ್ಸ್ ಮತ್ತು ಇತರ ಜಿಎಸ್‌ಎಂ ಮೊಬೈಲ್ ಆಪರೇಟರ್‌ಗಳು ಸರಕಾರಕ್ಕೆ ಪರವಾನಿಗಿ ಶುಲ್ಕ ಮತ್ತು ತರಂಗಾಂತರಗಳ ಶುಲ್ಕ 451ಕೋಟಿ ರೂಪಾಯಿಗಳ ಬಾಕಿಯನ್ನು ನೀಡಬೇಕಾಗಿದೆ ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
ಮಾರ್ಚ್ 31,2010ಕ್ಕೆ ಮುಕ್ತಾಯಗೊಂಡಂತೆ ಜಿಎಸ್‌ಎಂ ಆಪರೇಟರ್‌ಗಳು ಒಟ್ಟಾರೆ ಮೊತ್ತ ಹಾಗೂ ಬಡ್ಡಿ ಸೇರಿದಂತೆ 451.74 ಕೋಟಿ ರೂಪಾಯಿಗಳ ಬಾಕಿಯನ್ನು ನೀಡಬೇಕಾಗಿದೆ ಎಂದು ಕೇಂದ್ರದ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ಭಾರ್ತಿ ಏರ್‌ಟೆಲ್ ಸಂಸ್ಥೆ ತರಂಗಾಂತ ಶುಲ್ಕ 135.55 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದ್ದು ಅಗ್ರಸ್ಥಾನದಲ್ಲಿದೆ.ವೋಡಾಫೋನ್ 71.77 ಕೋಟಿ ರೂಪಾಯಿ, ರಿಲಯನ್ಸ್ ಕಮ್ಯೂನಿಕೇಶನ್ಸ್ 48.54 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿದೆ.
ಬಿಪಿಎಲ್ ಮೊಬೈಲ್ ಕಮ್ಯೂನಿಕೇಶನ್ಸ್ (29ಕೋಟಿ ರೂ), ಏರ್‌ಸೆಲ್(0.44ಕೋಟಿ ರೂ), ಬಿಎಸ್‌ಎನ್‌ಎಲ್ 94.44 ಕೋಟಿ ರೂಪಾಯಿ, ಎಂಟಿಎನ್‌ಎಲ್ (0.73ಕೋಟಿ ರೂ) ಮತ್ತು ಡಿಶ್‌ನೆಟ್ ವೈರ್‌ಲೆಸ್ 13.91ಕೋಟಿ ರೂಪಾಯಿಗಳ ಬಾಕಿಯನ್ನು ಉಳಿಸಿಕೊಂಡಿವೆ ಎಂದು ಸಚಿವ ಸಚಿನ್ ಪೈಲಟ್ ತಿಳಿಸಿದ್ದಾರೆ.