ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಥಳೀಯ ಕರೆಗಳಿಗಿಂತ ಎಸ್‌ಟಿಡಿ ಕರೆಗಳು ಅಗ್ಗ:ಟಾಟಾ ಇಂಡಿಕಾಂ (Tata Tele | STD calls | Local calls | Prepaid users | Tariff war | 'Ulta Plan')
ಸ್ಥಳೀಯ ಕರೆಗಳಿಗಿಂತ ಎಸ್‌ಟಿಡಿ ಕರೆಗಳು ಅಗ್ಗ:ಟಾಟಾ ಇಂಡಿಕಾಂ
ನವದೆಹಲಿ, ಗುರುವಾರ, 5 ಆಗಸ್ಟ್ 2010( 20:14 IST )
PTI
ದರ ಸಮರ ತೀವ್ರಗೊಳಿಸಿರುವ ಟಾಟಾ ಟೆಲಿಸರ್ವಿಸಸ್, ಸಿಡಿಎಂಎ ಪ್ರಿಪೇಡ್ ಗ್ರಾಹಕರ ಎಸ್‌ಟಿಡಿ ಕರೆಗಳ ದರವನ್ನು ಪ್ರತಿ ಸೆಕೆಂಡ್‌ಗೆ ಅರ್ಧ ಪೈಸೆಗೆ ಇಳಿಕೆಗೊಳಿಸಿದ್ದು, ಸ್ಥಳೀಯ ಕರೆಗಳ ದರಗಳಿಗಿಂತ ಅಗ್ಗವಾಗಿಸಿದೆ.
ದೇಶದಲ್ಲಿ ಪ್ರತಿ ಸೆಕೆಂಡ್‌ಗೆ ಕರೆ ದರವನ್ನು ನಿಗದಿಪಡಿಸಿ ಖ್ಯಾತಿಯನ್ನು ಪಡೆದ ಟಾಟಾ ಟೆಲಿ ಸರ್ವಿಸಸ್, ಟಾಟಾ ಇಂಡಿಕಾಂ ಗ್ರಾಹಕರಿಗಾಗಿ 'ಉಲ್ಟಾ ಪ್ಲ್ಯಾನ್' ಯೋಜನೆಯನ್ನು ಜಾರಿಗೆ ತಂದಿದ್ದು, ಎಸ್‌ಟಿಡಿ ಕರೆ ದರಗಳನ್ನು ಪ್ರತಿ ನಿಮಿಷಕ್ಕೆ 30 ಪೈಸೆಯಂತೆ ನಿಗದಿಪಡಿಸಿದ್ದು, ಸ್ಥಳೀಯ ಕರೆಗಳನ್ನು ಪ್ರತಿ ನಿಮಿಷಕ್ಕೆ 50 ಪೈಸೆ ನಿಗದಿಪಡಿಸಿದೆ.
'ಉಲ್ಟಾ ಪ್ಲ್ಯಾನ್' ಯೋಜನೆಯನ್ವಯ ಎಸ್‌ಟಿಡಿ ಕರೆಗಳು ಸ್ಥಳೀಯ ಕರೆಗಳಿಗಿಂತ ಅಗ್ಗವಾಗಲಿವೆ. ಹೆಚ್ಚಿನ ಎಸ್‌ಟಿಡಿ ಕರೆಗಳನ್ನು ಮಾಡುವ ಗ್ರಾಹಕರಿಗೆ ಹೆಚ್ಚು ಸೂಕ್ತವಾಗಲಿದೆ ಎಂದು ಟಾಟಾಟೆಲಿ ಪ್ರಾದೇಶಿಕ ಮುಖ್ಯಸ್ಥ(ಉತ್ತರ-ಸೆಂಟ್ರಲ್)ವಿನೀತ್ ಭಾಟಿಯಾ ಹೇಳಿದ್ದಾರೆ.
ಕಳೆದ ಜೂನ್ ತಿಂಗಳ ಅವಧಿಯಲ್ಲಿ 2.3 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದ್ದು, 'ಉಲ್ಟಾ ಪ್ಲ್ಯಾನ್' ಯೋಜನೆ ಜಾರಿಯಿಂದಾಗಿ ಶೇ.30ರಷ್ಟು ಗ್ರಾಹಕರಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಟಾಟಾ ಟೆಲಿ ಸಂಸ್ಥೆ, ಟಾಟಾ ಇಂಡಿಕಾಂನಲ್ಲಿ ಸಿಡಿಎಂಎ ಸೇವೆಯನ್ನು ನೀಡುತ್ತಿದ್ದು, ಟಾಟಾ ಡೋಕೋಮೋ ಬ್ರ್ಯಾಂಡ್‌ನಡಿಯಲ್ಲಿ ಜಿಎಸ್‌ಎಂ ಸೇವೆಯನ್ನು ನೀಡುತ್ತಿದೆ.ಗ್ರಾಹಕರು 58 ರೂಪಾಯಿ ಮತ್ತು 104 ರೂಪಾಯಿಗಳನ್ನು ಪಾವತಿಸಿ ಸೇವೆಯನ್ನು ಪಡೆಯಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಗ್ರಾಹಕರು ರಿಚಾರ್ಜ್ ಮಾಡಿಸಿದ ದಿನಾಂಕದಿಂದ ಮಾಸಿಕವಾಗಿ 600 ನಿಮಿಷಗಳ ಅವಧಿಗೆ ಪ್ರತಿ ನಿಮಿಷಕ್ಕೆ 30ಪೈಸೆ ದರದಲ್ಲಿ ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ. ನಂತರ ಎಸ್‌ಟಿಡಿ ಕರೆಗಳ ದರ ಪ್ರತಿ ನಿಮಿಷಕ್ಕೆ 50 ಪೈಸೆ ನಿಗದಿಪಡಿಸಲಾಗಿದೆ. ಗ್ರಾಹಕರು ಪ್ರತಿ ಸಂದೇಶಕ್ಕೆ (ರಾಷ್ಟ್ರೀಯ ಮತ್ತು ಸ್ಥಳೀಯ) 50 ಪೈಸೆ ದರವನ್ನು ಭರಿಸಬೇಕಾಗುತ್ತದೆ.
ಪ್ರಸ್ತುತವಿರುವ ಟಾಟಾ ಇಂಡಿಕಾಂ ಮತ್ತು ಟಾಟಾ ಡೋಕೋಮೋ ಗ್ರಾಹಕರು, 26 ರೂಪಾಯಿಗಳನ್ನು ಪಾವತಿಸಿ 'ಉಲ್ಟಾ ಪ್ಲ್ಯಾನ್' ಯೋಜನೆಯನ್ನು ಪಡೆಯಬಹುದಾಗಿದೆ ಎಂದು ಟಾಟಾ ಟೆಲಿ ಸರ್ವಿಸಸ್ ಮೂಲಗಳು ತಿಳಿಸಿವೆ.