ದೇಶದ ಆರ್ಥಿಕ ವೃದ್ಧಿ ದರ ವರ್ಷಾಂತ್ಯಕ್ಕೆ ಶೇ.8.4ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಯನ ನಡೆಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಆರಂಭಿಕ ತ್ರೈಮಾಸಿಕ ಅವಧಿಯಲ್ಲಿ ಕೈಗಾರಿಕೋದ್ಯಮ ಫಲಿತಾಂಶ ಚೇತರಿಕೆಯಿಂದಾಗಿ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಜಿಡಿಪಿ ದರದಲ್ಲಿ ಹೆಚ್ಚಳವಾಗಲಿದೆ.ಕಳೆ ತಿಂಗಳುಗಳ ಹಿಂದೆ ಆರ್ಥಿಕ ವೃದ್ಧಿ ದರ ಶೇ.8.2ಕ್ಕೆ ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ದೇಶದ ಕೃಷಿ ಕ್ಷೇತ್ರ ಶೇ.4.1ರಷ್ಟು ಚೇತರಿಸಿಕೊಳ್ಳಲಿದ್ದು,ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಶೇ.9.1ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಸೆಪ್ಟೆಂಬರ್,2010ಕ್ಕೆ ಎರಡನೇ ತ್ರೈಮಾಸಿಕ ಅಂತ್ಯಗೊಂಡಂತೆ, ಆರ್ಥಿಕ ವೃದ್ಧಿ ದರದಲ್ಲಿ ಶೇ.8.2ರಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಕಾರ್ಪೋರೇಟ್ ಕ್ಷೇತ್ರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.20ರಿಂದ ಶೇ.22ಕ್ಕೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.