ವಾರ್ಷಿಕ ಹಣದುಬ್ಬರ ದರ ಮುಂಬರುವ ಡಿಸೆಂಬರ್ ವೇಳೆಗೆ ಇಳಿಕೆಯಾಗಲಿವೆ ಎಂದು ವಿತ್ತಸಚಿವಾಲಯದ ಮುಖ್ಯ ಲೆಕ್ಕಪರಿಶೋಧಕ ಟಿ.ಸಿ.ಅನಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂಬರುವ ಡಿಸೆಂಬರ್ ವೇಳೆಗೆ ಹಣದುಬ್ಬರ ದರ ಇಳಿಕೆಯಾಗಲಿದೆ.ಹಣದುಬ್ಬರ ಇದೀಗ ಇಳಿಕೆಯಾಗಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆಗಳಿವೆ. ಆದರೆ, ಯಾವ ತಿಂಗಳಲ್ಲಿ ಸಂಪೂರ್ಣ ಇಳಿಕೆಯಾಗಲಿದೆ ಎಂದು ಹೇಳಿಕೆ ನೀಡುವುದು ಕಷ್ಟಕರ ಸಂಗತಿಯಾಗಿದೆ ಎಂದು ಅನಂತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಉತ್ಪಾದಕ ವಸ್ತುಗಳ ದರ ಏರಿಕೆಗಳ ಹಿನ್ನೆಲೆಯಲ್ಲಿ, ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ದರ ಸತತ ನಾಲ್ಕು ತಿಂಗಳುಗಳ ಅವಧಿಗೆ ಶೇ.10.55ಕ್ಕೆ ತಲುಪಿದ್ದು ಎರಡಂಕಿಗೆ ಮುಂದುವರಿದಿತ್ತು.
ಆಹಾರ ಹಣದುಬ್ಬರ ದರ, ಜುಲೈ24ಕ್ಕೆ ವಾರಂತ್ಯಗೊಂಡಂತೆ ಶೇ.9.53ಕ್ಕೆ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.