ದೇಶದ ಕಾರು ತಯಾರಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಹುಂಡೈ ಮೋಟಾರ್ ಇಂಡಿಯಾ,ಚೆನ್ನೈ ಢಟಕವನ್ನು ಮೇಲ್ದರ್ಜೇಗೇರಿಸಲಾಗುತ್ತಿದ್ದು, ಉತ್ಪಾದನೆಯಲ್ಲಿ ಶೇ.12ರಷ್ಟು ಹೆಚ್ಚಳಗೊಳಿಸಲಾಗುತ್ತಿದೆ.ವಾರ್ಷಿಕವಾಗಿ 6.7 ಲಕ್ಷ ಕಾರುಗಳ ಉತ್ಪಾದನಾ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಭಾರತದ ಕಾರು ರಫ್ತು ವಹಿವಾಟಿನಲ್ಲಿ ಅಗ್ರಸ್ಥಾನದಲ್ಲಿರುವ ಹುಂಡೈ,ರಫ್ತು ವಹಿವಾಟಿನಲ್ಲಿ ಶೇ.8ರಷ್ಟು ಕುಸಿತಗೊಳಿಸಿ, ದೇಶಿಯವಾಗಿ ಹೆಚ್ಚುವರಿ 2.5 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಯೋಜನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕವಾಗಿ 6.7 ಲಕ್ಷ ಕಾರುಗಳ ಉತ್ಪಾದನೆಗಾಗಿ, ಅಲ್ಪ ಹೂಡಿಕೆಯನ್ನು ಮಾಡಲಾಗುವುದು ಎಂದು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್‌ಎಂಐಎಲ್) ವ್ಯವಸ್ಥಾಪಕ ನಿರ್ದೇಶಕ ಎಚ್.ಡಬ್ಲೂ ಪರ್ಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್(ಎಚ್‌ಎಂಐಎಲ್)ನ ಚೆನ್ನೈ ಘಟಕದಲ್ಲಿ ವಾರ್ಷಿಕವಾಗಿ 6 ಲಕ್ಷ ಕಾರುಗಳನ್ನು ಉತ್ಪಾದಿಸಲಾಗುತ್ತದೆ.
ಸಾಗರೋತ್ತರ ಮಾರುಕಟ್ಟೆಗಳ ರಫ್ತು ವಹಿವಾಟಿನ ಗುರಿಯ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರ್ಕ್, ರಫ್ತು ವಹಿವಾಟನ್ನು 2.5 ಲಕ್ಷ ಕಾರುಗಳಿಗೆ ಸ್ಥಿರಗೊಳಿಸಲಾಗಿದೆ. ದೇಶಿಯ ಬೇಡಿಕೆಯತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ ವ್ಯವಸ್ಥಾಪಕ ನಿರ್ದೇಶಕ ಎಚ್.ಡಬ್ಲೂ ಪರ್ಕ್ ಹೇಳಿದ್ದಾರೆ.