ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರ್ತಿ ಏರ್‌ಟೆಲ್ ದೇಶದ ನಂಬರ್ ಒನ್ ಟೆಲಿಕಾಂ ಕಂಪೆನಿ:ವರದಿ (Bharti Airtel | Telecom company | Aircel | Highest growth | Vodafone)
ಭಾರ್ತಿ ಏರ್‌ಟೆಲ್ ದೇಶದ ನಂಬರ್ ಒನ್ ಟೆಲಿಕಾಂ ಕಂಪೆನಿ:ವರದಿ
ಕೋಲ್ಕತಾ, ಶುಕ್ರವಾರ, 6 ಆಗಸ್ಟ್ 2010( 15:47 IST )
ಖಾಸಗಿ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‌ಟೆಲ್,ನಿವ್ವಳ ಆದಾಯದಲ್ಲಿ ಶೇ.37.2ರಷ್ಟು ಏರಿಕೆ ಕಂಡು ದೇಶದ ನಂಬರ್ ಒನ್ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದೆ ಎಂದು ವೈಸ್ ಆಂಡ್ ಡಟಾ ಜರ್ನಲ್ ನಡೆಸಿದ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಏರ್‌ಸೆಲ್ ಕಂಪೆನಿ, ವಾರ್ಷಿಕವಾಗಿ 4,700 ಕೋಟಿ ರೂಪಾಯಿಗಳ ಆದಾಯಗಳಿಸುವ ಮೂಲಕ, ದೇಶದ ಟಾಪ್-10 ಟೆಲಿಕಾಂ ಕಂಪೆನಿಗಳಲ್ಲಿ ಎಂಟನೇ ಸ್ಥಾನವನ್ನು ಪಡೆದಿದೆ ಎಂದು ವರದಿಯಲ್ಲಿ ಪ್ರಕಟಿಸಿದೆ.
ಭಾರ್ತಿ ಏರ್‌ಟೆಲ್ ಸಂಸ್ಥೆ, 2009-10ರ ಆರ್ಥಿಕ ವರ್ಷದಲ್ಲಿ 38,800 ಕೋಟಿ ರೂಪಾಯಿಗಳ ಆದಾಯ ಗಳಿಸುವ ಮೂಲಕ,ದೇಶದ ಟಾಪ್ -10 ಟೆಲಿಕಾಂ ಕಂಪೆನಿಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ವೋಡಾಫೋನ್ ಸಂಸ್ಥೆ, ನಿವ್ವಳ ಆದಾಯದಲ್ಲಿ ಶೇ.13.7ರಷ್ಟು ಏರಿಕೆಯಾಗಿ 23,200 ಕೋಟಿ ರೂಪಾಯಿಗಳಿಗೆ ತಲುಪುವ ಮೂಲಕ, ಟೆಲಿಕಾಂ ಕಂಪೆನಿಗಳಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ.
ಸಾರ್ವಜನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಿಎಸ್‌ಎನ್‌ಎಲ್, 2009-10ರ ಅವಧಿಯ ನಿವ್ವಳ ಲಾಭದಲ್ಲಿ ಶೇ.14ರಷ್ಟು ಇಳಿಕೆಯಾಗಿ 30,240 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಟಾಪ್-10 ಟೆಲಿಕಾಂ ಕಂಪೆನಿಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ರಿಲಯನ್ಸ್ ಕಮ್ಯೂನಿಕೇಶನ್ಸ್, 2009-10ರ ಅವಧಿಯ ನಿವ್ವಳ ಲಾಭದಲ್ಲಿ ಶೇ.3.5ರಷ್ಟು ಕುಸಿತವಾಗಿ 22,130ಕೋಟಿ ರೂಪಾಯಿಗಳಿಗೆ ತಲುಪಿ, ನಾಲ್ಕನೇ ಸ್ಥಾನವನ್ನು ಪಡೆದಿದೆ.
ಐಡಿಯಾ ಸೆಲ್ಯೂಲರ್, ಟಾಟಾ ಕಮ್ಯೂನಿಕೇಶನ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಕಂಪೆನಿಗಳು ಕ್ರಮವಾಗಿ 5,6ಮತ್ತು 7ನೇ ಸ್ಥಾನವನ್ನು ಪಡೆದಿದ್ದು, ನಿವ್ವಳ ಆದಾಯದಲ್ಲಿ 11,390 ಕೋಟಿ ರೂಪಾಯಿ, 11,000 ಕೋಟಿ ರೂ ಮತ್ತು 6900 ಕೋಟಿ ರೂಪಾಯಿಗಳಿಗೆ ತಲುಪಿದೆ.
ಮತ್ತೊಂದು ಸಾರ್ವಜನಿಕ ಕ್ಷೇತ್ರದ ದೈತ್ಯ ಕಂಪೆನಿಯಾದ ಎಂಟಿಎನ್‌ಎಲ್, ನಿವ್ವಳ ಆದಾಯ 3,650 ಕೋಟಿ ರೂಪಾಯಿಗಳಿಗೆ ತಲುಪಿ ಅಲ್ಪ ಕುಸಿತವಾಗಿದ್ದು, ಟಾಪ್-10 ಟೆಲಿಕಾಂ ಕಂಪೆನಿಗಳಲ್ಲಿ ಐದನೇ ಸ್ಥಾನವನ್ನು ಪಡೆದಿದೆ.