ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲ್ಯಾಟಿನ್ ಅಮೆರಿಕ ಕಂಪೆನಿ ಖರೀದಿಗೆ ಮಾತುಕತೆ:ಟಿಸಿಎಸ್ (Tata Consultancy Services | Software-services | Latin America | Henry Manzano)
Bookmark and Share Feedback Print
 
ಲ್ಯಾಟಿನ್ ಅಮೆರಿಕದಲ್ಲಿರುವ ಸಾಫ್ಟ್‌ವೇರ್ ಕಂಪೆನಿಯನ್ನು ಖರೀದಿಸುವ ನಿಟ್ಟಿನಲ್ಲಿ, ಪ್ರಾಥಮಿಕ ಹಂತದ ಮಾತುಕತೆಗಳು ನಡೆಯುತ್ತಿವೆ ಎಂದು ಟಾಟಾ ಕನ್ಸಲ್‌ಟನ್ಸಿ ಅಧಿಕಾರಿಗಳು ಹೇಳಿದ್ದಾರೆ.

ಕೆಲ ಆಯ್ದ ರಾಷ್ಟ್ರಗಳಲ್ಲಿರುವ ಕಂಪೆನಿಗಳನ್ನು ಖರೀದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಲ್ಯಾಟಿನ್ ಅಮೆರಿಕ ಕಾರ್ಾಚರಣೆಯ ಉಸ್ತುವಾರಿಯನ್ನು ಹೊತ್ತುಕೊಂಡಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆನ್ರಿ ಮಂಜಾನೊ ಡೊ ಜೊನ್ಸ್‌ ನ್ಯೂಸ್‌ವೈರ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬ್ರೆಜಿಲ್, ಮೆಕ್ಸಿಕೊ ರಾಷ್ಟ್ರಗಳಲ್ಲಿ ಕೆಲ ಸಾಫ್ಟ್‌ವೇರ್ ಕಂಪೆನಿಗಳನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುಂಬರುವ ಐದು ವರ್ಷಗಳ ಅವಧಿಯಲ್ಲಿ ಉಭಯ ಕಂಪೆನಿಗಳ ನಿವ್ವಳ ವಹಿವಾಟಿನಲ್ಲಿ ಶೇ.70ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಹಲವಾರು ರಾಷ್ಟ್ರಗಳಲ್ಲಿ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶಗಳಿವೆ. ಆದ್ದರಿಂದ ಸೂಕ್ತ ಕಂಪೆನಿಗಳ ಖರೀದಿಗಾಗಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸ್ತುತ ವಾರ್ಷಿಕವಾಗಿ 300 ಮಿಲಿಯನ್ ಡಾಲರ್ ಆದಾಯವನ್ನು ಹೊಂದಿರುವ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್, ಲ್ಯಾಟಿನ್ ಅಮೆರಿಕದ ಕಂಪೆನಿ ಖರೀದಿಸುವುದರೊಂದಿಗೆ 1ಬಿಲಿಯನ್ ಡಾಲರ್ ವಹಿವಾಟಿನ ಗುರಿಯನ್ನು ಹೊಂದಿದೆ ಎಂದು ಹೆನ್ರಿ ಮಾಝಾಂನೊ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ