ಪ್ರಸಕ್ತ ಆರ್ಥಿಕ ವರ್ಷದಿಂದ ನೂತನವಾಗಿ ಜಾರಿಗೆ ತರಲು ಉದ್ದೇಶಿಸಲಾದ ಸರಕು ಸಾಗಾಣೆ ಮತ್ತು ಸೇವಾ ತೆರಿಗೆ ಪರೋಕ್ಷ ತೆರಿಗೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರಗಿಡಬೇಕು ಎಂದು ರಾಜ್ಯ ಸರಕಾರಗಳು ಕೋರಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಪೆಟ್ರೋಲಿಯಂ ಉತ್ಪನ್ನಗಳು, ಮದ್ಯ ಮತ್ತು ನೈಸರ್ಗಿಕ ಅನಿಲವನ್ನು ಸರಕು ಸಾಗಾಣೆ ಮತ್ತು ಸೇವಾ ಕ್ಷೇತ್ರಗಳ ತೆರಿಗೆಯಿಂದ ಹೊರಗಿಡಬೇಕು ಎಂದು ರಾಜ್ಯ ಸರಕಾರಗಳು ಮನವಿ ಮಾಡಿವೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ ಏಕ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲು ಸರಕು ಸಾಗಾಣೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಜಿಎಸ್‌ಟಿ ಸಮಿತಿ ತಿರಸ್ಕರಿಸಿತ್ತು.
ಜಿಎಸ್‌ಟಿ ಸಮಿತಿ ಮುಖ್ಯಸ್ಥ ಆಸಿಮ್ ದಾಸ್‌ಗುಪ್ತಾ, ಎಲ್ಲಾ ರಾಜ್ಯಗಳ ವಿತ್ತಸಚಿವರುಗಳೊಂದಿಗೆ ಚರ್ಚಿಸುವುದಾಗಿ ಹೇಳಿಕೆ ನೀಡಿದ್ದಾರೆ.