ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾಸಾಂತ್ಯಕ್ಕೆ ಮತ್ತೆ ಪೆಟ್ರೋಲ್ ದರದಲ್ಲಿ 1 ರೂಪಾಯಿ ಏರಿಕೆ (Petrol price | Oil Ministry | Government | Hike | Pranab Mukherjee)
Bookmark and Share Feedback Print
 
ಕೇಂದ್ರ ಸರಕಾರ ಅಗಸ್ಟ್ 30ಕ್ಕೆ ಮಾಸಾಂತ್ಯಗೊಂಡಂತೆ ಪೆಟ್ರೋಲ್ ದರದಲ್ಲಿ 1 ರೂಪಾಯಿ ಏರಿಕೆಗೊಳಿಸುವ ಸಾಧ್ಯತೆಗಳಿವೆ ಎಂದು ತೈಲ ಸಚಿವಾಲಯದ ಮೂಲಗಳು ತಿಳಿಸಿವೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿ ತೈಲ ದರ ಪ್ರತಿ ಬ್ಯಾರೆಲ್‌ಗೆ ಮೂರು ತಿಂಗಳ ಗರಿಷ್ಠ ಏರಿಕೆ ಕಂಡ ಹಿನ್ನೆಲೆಯಲ್ಲಿ,ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಂಡ ನಂತರ ದರ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ತೈಲ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರಗಳು ಏರಿಕೆಯಾಗಿದ್ದರಿಂದ, ಕೇಂದ್ರ ಸರಕಾರ ಕಳೆದ ಜೂನ್ 25 ರಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ಘೋಷಿಸಿತ್ತು.

ಕೇಂದ್ರ ಸರಕಾರದಿಂದ ಪೆಟ್ರೋಲ್ ದರಗಳ ಏರಿಕೆಯನ್ನು ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ, ತೈಲ ಕಂಪೆನಿಗಳು ಪ್ರತಿ ತಿಂಗಳು ದರವನ್ನು ಪರಿಷ್ಕರಿಸಲಿವೆ.

ಇಂಧನ ದರಗಳ ಏರಿಕೆ ಕುರಿತಂತೆ ವಿರೋಧ ಪಕ್ಷಗಳು ಹಾಗೂ ಯುಪಿಎ ಮೈತ್ರಿಕೂಟದ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಮತ್ತೆ ತೈಲ ದರ ಏರಿಕೆ ಘೋಷಣೆ, ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರವಾಗಲಿದೆ ಎಂದು ಮೂಲಗಳು ತಿಳಿಸಿವೆ.

ದರ ಏರಿಕೆ ಸಮಸ್ಯೆ ಕುರಿತಂತೆ, ವಿರೋಧ ಪಕ್ಷಗಳು ಹಾಗೂ ಸರಕಾರ ಒಂದಾಗಿ ಕಾರ್ಯನಿರ್ವಹಿಸಲು ಬೆಂಬಲ ನೀಡುವಂತೆ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ