ಕೇಂದ್ರ ಸರಕಾರ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್(ಒಎನ್‌ಜಿಸಿ)ಶೇ.5ರಷ್ಟು ಶೇರುಗಳು, ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ)ಶೇ.10ರಷ್ಟು ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದು, 21ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಿದೆ ಎಂದು ತೈಲ ಸಚಿವಾಲಯದ ಕಾರ್ಯದರ್ಶಿ ಎಸ್.ಸುಂದರೇಶನ್ ಹೇಳಿದ್ದಾರೆ.
ವಿತ್ತ ಸಚಿವಾಲಯ ಹೂಡಿಕೆ ಹಿಂತೆಗೆತ ಇಲಾಖೆಗೆ ತೈಲ ಕಂಪೆನಿಗಳ ಶೇರು ಮಾರಾಟಕ್ಕೆ ಅನುಮತಿಯನ್ನು ನೀಡಿದೆ ಎಂದು ತಿಳಿಸಿದ್ದಾರೆ.
ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್(ಒಎನ್‌ಜಿಸಿ)ಶೇ.5ರಷ್ಟು ಅಥವಾ 10.6 ಕೋಟಿ ಶೇರುಗಳನ್ನು ಮಾರಾಟ ಮಾಡಿದಲ್ಲಿ 13,189ಕೋಟಿ ರೂಪಾಯಿಗಳ ಸಂಗ್ರಹವಾಗಲಿದೆ ಎಂದು ಹೇಳಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಶೇ.10 ಶೇರುಗಳನ್ನು ಮಾರಾಟ ಮಾಡುವುದರಿಂದ ಒಟ್ಟು 21,000 ಕೋಟಿ ರೂಪಾಯಿಗಳ ಸಂಗ್ರಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.