ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರತನ್ ಟಾಟಾ ಉತ್ತರಾಧಿಕಾರಿ ಆಯ್ಕೆಗೆ ಸಮಿತಿ ರಚನೆ:ಟಾಟಾ (Tata group | Ratan Tata | Panel | Conglomerate | Successor)
Bookmark and Share Feedback Print
 
ದೇಶದ ಕೈಗಾರಿಕೋದ್ಯಮ ವಲಯದಲ್ಲಿ ಎರಡು ಶತಮಾನಗಳಿಂದ ಖ್ಯಾತಿ ಪಡೆದ ಟಾಟಾ ಗ್ರೂಪ್, ರತನ್ ಟಾಟಾ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ.ರತನ್ ಟಾಟಾ ಅವರ ಅಧಿಕಾರವಧಿ 2012ಕ್ಕೆ ಮುಕ್ತಾಯಗೊಳ್ಳಲಿದೆ.

ಸಮಿತಿಯಲ್ಲಿ ಟಾಟಾ ಗ್ರೂಪ್‌ನ ನಿರ್ದೇಶಕರಾದ ಎನ್‌.ಎ.ಸೂನಾವಾಲಾ, ಸೈರಸ್ ಮಿಸ್ಟ್ರಿ ಮತ್ತು ಆರ್‌.ಕೆ.ಕೃಷ್ಣಕುಮಾರ್ ಸೇರಿದಂತೆ, ಸಲಹೆಗಾರರಾದ ಶಿರಿನ್ ಭರುಚಾ ಮತ್ತು ಇಂಗ್ಲೆಂಡ್‌ನಲ್ಲಿ ಪ್ರೋಫೆಸರ್ ವೃತ್ತಿಯಲ್ಲಿರುವ ಲಾರ್ಡ್ ಭಟ್ಟಾಚಾರ್ಯ ಸ್ಥಾನಪಡೆದಿದ್ದಾರೆ.

ಮುಂಬರುವ 2012ರಲ್ಲಿ ನಿವೃತ್ತಿಯಾಗಲಿರುವ ರತನ್ ಟಾಟಾ ಅವರ ಉತ್ತರಾಧಿಕಾರಿಗಾಗಿ ಹುಡುಕಾಟ ನಡೆದಿದೆ. ಕಂಪೆನಿಯೊಳಗೆ ಮತ್ತು ದೇಶ, ವಿದೇಶಗಳಲ್ಲಿರುವ ಪ್ರತಿಭಾವಂತರ ಕೂಡಾ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಟಾಟಾ ಗ್ರೂಪ್ ಮೂಲಗಳು ತಿಳಿಸಿವೆ.

ವಾರ್ಷಿಕವಾಗಿ 70 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಹಾಗೂ ವಿಶ್ವದಾದ್ಯಂತ 357,000 ಉದ್ಯೋಗಿಗಳನ್ನು ಹೊಂದಿದೆ. ಟಾಟಾ ಗ್ರೂಪ್ ಸಂಸ್ಥೆ ಆಧೀನದಲ್ಲಿ 98 ಕಂಪೆನಿಗಳನ್ನು ಮುನ್ನಡೆಸುತ್ತಿದ್ದು, ವಿದೇಶಗಳಿಂದ ಶೇ.65ರಷ್ಟು ಆದಾಯವನ್ನು ಗಳಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ