ದೇಶ ಕಂಡ ಖ್ಯಾತ ಉದ್ಯಮಿ ರತನ್ ಟಾಟಾ, ಪ್ರಾಮಾಣಿಕತೆ ,ಏಕತೆಯ ಸಂಕೇತವಾಗಿದ್ದು, ಸ್ಪೂರ್ತಿಯ ನಾಯಕತ್ವವನ್ನು ಹೊಂದಿದ್ದಾರೆ ಎಂದು ಮಹಾರಾಷ್ಟ್ರದ ರಾಜ್ಯಪಾಲ ಕೆ.ಶಂಕರ್‌ನಾರಾಯಣನ್ ವರ್ಣಿಸಿ, ರತನ್ ಟಾಟಾ ಅವರಿಗೆ ದಶಕದ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದರು.
ಫೆಡರೇಶನ್ ಆಫ್ ಇಂಡೋ-ಇಸ್ರೇಲ್ ಚೇಂಬರ್ ಆಫ್ ಕಾಮರ್ಸ್ ಪರವಾಗಿ ರಾಜ್ಯಪಾಲ ಶಂಕರ್‌ನಾರಾಯಣನ್ ಮಾತನಾಡಿ,ಟಾಟಾ ಉದ್ಯಮ ನಂಬಿಕೆ ಪ್ರಮಾಣಿಕತೆಗೆ ಹೆಸರುವಾಸಿಯಾಗಿದ್ದು, ದೇಶದ ಮನಮನೆಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗಯಾದೊಡನೆ ಟಾಟಾ ಟೀ, ನಂತರ ಉಪಹಾರದ ರುಚಿಗಾಗಿ ಟಾಟಾ ಉಪ್ಪು ಸೇರಿದಂತೆ, ಟಾಟಾ ಗ್ರೂಪ್ ದೇಶದ ಜನತೆಯ ಜೀವನದಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಭಾರತ ಮತ್ತು ಇಸ್ರೇಲ್ ರಾಷ್ಟ್ರಗಳು ಕೃಷಿ, ತಂತ್ರಜ್ಞಾನ, ಪ್ರವಾಸೋದ್ಯಮ ಸೇರಿದಂತೆ ಹಲವಾರು ವಹಿವಾಟುಗಳಲ್ಲಿ ಪರಸ್ಪರ ಸಹಕಾರವನ್ನು ಮತ್ತಷ್ಟು ವೃದ್ಧಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.