ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಕಠಿಣ ಕ್ರಮ:ಗೋಕರ್ಣ್ (RBI | Inflation | Food inflation | Governor | Monsoon)
Bookmark and Share Feedback Print
 
ಹಣದುಬ್ಬರ ದರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು, ಉತ್ತಮ ಮುಂಗಾರು ಮಳೆಯ ಹಿನ್ನೆಲೆಯಲ್ಲಿ, ಅಹಾರ ಹಣದುಬ್ಬರ ದರ ಕುಸಿತವಾಗುವ ನಿರೀಕ್ಷೆಗಳಿವೆ ಎಂದು ಆರ್‌ಬಿಐ ಉಪಗೌವರ್ನರ್ ಹೇಳಿದ್ದಾರೆ.

ಜನೆವರಿ ತಿಂಗಳ ಅವಧಿಯಲ್ಲಿ ಶೇ.17ರಷ್ಟಿದ್ದ ಆಹಾರ ಹಣದುಬ್ಬರ ದರ, ಜುಲೈ 24ಕ್ಕೆ ವಾರಂತ್ಯಗೊಂಡಂತೆ ಶೇ.9.53ಕ್ಕೆ ಇಳಿಕೆಯಾಗಿದೆ. ಉತ್ತಮ ಮುಂಗಾರು ಮಳೆಯಿಂದಾಗಿ ಆಹಾರ ಹಣದುಬ್ಬರ ದರದಲ್ಲಿ ಮತ್ತಷ್ಟು ಕುಸಿತವಾಗಲಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಹಣದುಬ್ಬರ ದರ ನಿಯಂತ್ರಣಕ್ಕಾಗಿ, ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ವರ್ಷದ ಎರಡನೇ ಅರ್ಧಾವಧಿಯಲ್ಲಿ ಪರಿಣಾಮಗಳು ಕಂಡುಬರಲಿವೆ ಎಂದು ಆರ್‌ಬಿಐ ಉಪಗೌವರ್ನರ್ ಸುಬೀರ್ ಗೋಕರ್ಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರ ದರವನ್ನು ಅಳೆಯುವ ಸಗಟು ಸೂಚ್ಯಂಕ ದರ, ಜುಲೈ ತಿಂಗಳ ಅವಧಿಯಲ್ಲಿ ಒಂದಂಕಿಗೆ ಇಳಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆಯಿದೆ ಎಂದು ಗೋಕರ್ಣ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ