ಯುನಿಲಿವರ್ ಸಂಸ್ಥೆ ತನ್ನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ ಶೇ.39ರಷ್ಟು ಏರಿರುವುದನ್ನು ಪ್ರಕಟಿಸಿದ್ದು, ಈವರೆಗೆ ಜಾಗತಿಕ ಆರ್ಥಿಕ ಕುಸಿತದಲ್ಲಿ ಈ ಮಟ್ಟಿನ ಬೆಳವಣಿಗೆ ಕಾಣಲು ಸಾಕಷ್ಟು ಕಷ್ಟಪಟ್ಟಿರುವುದಾಗಿ ಹೇಳಿಕೊಂಡಿದೆ.
ಲಿಪ್‌ಟಾನ್ ಟೀ, ಡೋವ್ ಸಾಬೂನು ಹಾಗೂ ಬೆನ್ ಅಂಡ್ ಜೆರ್ರಿ ಐಸ್‌ಕ್ರೀಂಗಳ ತಯಾರಿಕಾ ಸಂಸ್ಥೆಯಾದ ಯುನಿಲಿವರ್ ಸಂಸ್ಥೆಯ ಸಿಇಒ ಪೌಲ್ ಪೋಲ್‌ಮ್ಯಾನ್ ಮಾತನಾಡುತ್ತಾ, ಜಾಗತಿಕ ಆರ್ಥಿಕ ಕುಸಿತದ ನಡುವೆ ಇದ್ದ ತೀವ್ರ ಪೈಪೋಟಿಯನ್ನು ಎದುರಿಸಲು ಸಾಕಷ್ಟು ಕಷ್ಟ ಪಟ್ಟಿದ್ದೇವೆ ಎಂದರು.