ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್ ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದಾಖಲಿಸಿದ ನಿವ್ವಳ ಲಾಭ ಶೇ.49.04ರಷ್ಟು ಇಳಿಕೆಯಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ 151.04 ಕೋಟಿ ರೂಪಾಯಿಗಳಿದ್ದ ನಿವ್ವಳ ಲಾಭ ಈ ತ್ರೈಮಾಸಿಕ ಅವಧಿಯಲ್ಲಿ 76.97 ಕೋಟಿಗಿಳಿದಿದೆ.ಇನ್ಶೂರೆನ್ಸ್ ವಲಯದಲ್ಲಿ ಕೂಡಾ ಲಾಭ ಶೇ.18.22ರಷ್ಟು ಇಳಿಕೆಯಾಗಿದೆ.
ಸಂಸ್ಥೆಯ ರೆವೆನ್ಯೂ ಶೇ.26.68ರಷ್ಟು ಇಳಿಕೆಯಾಗಿದೆಯಾದರೂ, ಆಸ್ತಿ ನಿರ್ವಹಣೆ ವಿಭಾಗದಲ್ಲಿ ರೆವೆನ್ಯೂ ಶೇ.22.72ರಷ್ಟು ಏರಿಕೆ ದಾಖಲಿಸಿದೆ.