ಮುಂದಿನ ಎರಡು ತಿಂಗಳಲ್ಲಿ ಹಣದುಬ್ಬರ ಶೇ.15ರಷ್ಟು ಹೆಚ್ಚಲಿದೆ ಎಂದು ಆಸೋಚಾಮ್ ಭವಿಷ್ಯ ನುಡಿದಿದೆ.
ಗ್ರಾಹಕ ಸ್ನೇಹಿ ವಸ್ತುಗಳು ಈ ಸಂದರ್ಭ ಶೇ.18ರಷ್ಟು ಏರಿಕೆಯಾಗಲಿದೆ ಎಂದೂ ಇದೇ ಸಂಸ್ಥೆ ತಿಳಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಕೆರೋಸಿನ್ ಬೆಲೆ ಏರಿಕೆಯ ಪರಿಣಾಮ ಮುಂದಿನ ಮೂರು ತಿಂಗಳಲ್ಲಿ ತಿಳಿಯಲಿದ್ದು, ನೇರ ಪರಿಣಾಮ ಬೀರಲಿದೆ. ಈಗಾಗಲೇ ಮೇ ತಿಂಗಳಲ್ಲಿ ಶೇ.10.15ರಷ್ಟಿದ್ದ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.10.55ರಷ್ಟಕ್ಕೆ ಏರಿತ್ತು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಪರಿಣಾಮ ವಸ್ತುಗಳ ಸಾಗಾಟ ವೆಚ್ಚ ಹೆಚ್ಚಲಿದ್ದು, ಇದು ನೇರ ಪರಿಣಾಮ ಬೀರಲಿದೆ ಎಂದು ಆಸೋಚಾಮ್ ತಿಳಿಸಿದೆ.