ಸಾಮಾನ್ಯ ಮಧ್ಯಮ ವರ್ಗದ ಜನತೆಗೂ ವಿಮಾನದಲ್ಲಿ ಪ್ರಯಾಣಿಸುವ ಕನಸನ್ನು ನನಸಾಗಿಸಿದ ಹೆಗ್ಗಳಿಕೆಯ ಏರ್‌ಡೆಕ್ಕನ್ ಸ್ಥಾಪಿಸಿದ್ದ ಹಾಗೂ ಈಗ ಡೆಕ್ಕನ್ 360 ಸರುಕು ಸಾಗಣೆ ವಿಮಾನ ಸೇವೆಯ ಒಡೆಯರಾಗಿರುವ ಕ್ಯಾಪ್ಟನ್ ಗೋಪಿನಾಥ್ ಇದೀಗ ಟಾಟಾ ಸಮೂಹದ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಈಗ ಗೋಪಿನಾಥ್ ಅವರು ತಾವು ಸ್ಥಾಪಿಸಿರುವ ಡೆಕ್ಕನ್ ಚಾರ್ಟರ್ಸ್ ಸಂಸ್ಥೆಯ ಮೂಲಕ ಜೆಮ್‌ಶೆಡ್‌ಪುರದಿಂದ ಕೋಲ್ಕತ್ತಾಕ್ಕೆ ಚಾರ್ಟರ್ ವಿಮಾನ ಸೇವೆ ಆರಂಭಿಸಲಿದೆ.
ಡೆಕ್ಕನ್ ಚಾರ್ಟರ್ಸ್ ಮುಂದಿನ ವಾರದಿಂದ ನಿಗದಿತ ವೇಳಾಪಟ್ಟಿ ಇಲ್ಲದ ವಿಮಾನ ಸಂಚಾರ ಸೇವೆ ಆರಂಭಿಸಲಿದೆ. ಟಾಟಾ ಸ್ಟೀಲ್ ಸಂಸ್ಥೆಯ ಮುಖ್ಯ ಉಕ್ಕು ಘಟಕ ಇರುವ ಜೆಮ್‌ಶೆಡ್ ಪುರಕ್ಕೆ ಈ ಚಾರ್ಟರ್ ಸೇವೆ ಜಾರಿಗೆ ಬರಲಿದೆ.