ಟಾಟಾ ಮೋಟಾರ್ಸ್ ಜೂ.30ರಂದು ಅಂತ್ಯವಾದ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,988.73 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಟಾಟಾ ಮೋಟಾರ್ಸ್ 328.78 ಕೋಟಿ ರೂಪಾಯಿಗಳ ನಷ್ಟ ಹೊಂದಿತ್ತು.
ಇಂಡಿಗೋ ಮಾನ್ಜಾ, ಇಂಡಿಕಾ ವಿಸ್ತಾ ಹಾಗೂ ನ್ಯಾನೋ ಕಾರುಗಳು ಉತ್ತಮ ಮಾರಾಟ ಕಂಡಿದ್ದು ಇದು ಈ ಲಾಭಕ್ಕೆ ಪುಷ್ಟಿ ನೀಡಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.