ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನೀರಿಲ್ಲದೆ ಬಟ್ಟೆ ತೊಳೆಯುವ ಗೋದ್ರೇಜ್ ವಾಷಿಂಗ್ ಮೆಷಿನ್! (Washing Machine | Godrej)
Bookmark and Share Feedback Print
 
ಬಟ್ಟೆ ತೊಳೆಯಲು ನೀರಿಲ್ಲದಿದ್ದರೆ ಹೇಗೆ ಹೇಳಿ. ವಾಷಿಂಗ್ ಮೆಶಿನ್‌ನಲ್ಲೂ ಅಷ್ಟೆ, ನೀರಿಲ್ಲದಿದ್ದರೆ ಅದು ಬಟ್ಟೆಯನ್ನು ಹೇಗೆ ತೊಳೆದೀತು ಹೇಳಿ? ಆದರೆ ಇದೀಗ ಅಂಥ ಅಸಾಧ್ಯವೂ ಸಾಧ್ಯವಾಗಿದೆ. ಗೋದ್ರೇಜ್ ಕಂಪನಿ ದೇಶದಲ್ಲೇ ಇದೇ ಮೊದಲ ಬಾರಿಗೆ ನೀರು ಬಳಸದೇ ಬಟ್ಟೆ ತೊಳೆಯುವ ವಾಷಿಂಗ್ ಮೆಷಿನನ್ನು ಬಿಡುಗಡೆ ಮಾಡಿದೆ!

ಹೌದು. ಇದು ಆಶ್ಚರ್ಯವಾದರೂ ಸತ್ಯ. ನೀರು ಬಳಸದೆ ಬಟ್ಟೆಗಳನ್ನು ಓರೆನ್ ತಂತ್ರಜ್ಞಾನ ಆಧಾರಿತ ವಾಷಿಂಗ್ ಮೆಷಿನನ್ನು ಗೋದ್ರೆಜ್ ಕಂಪೆನಿ ತಯಾರಿಸಿದೆ. ಅಂದಹಾಗೆ, ಈ ನೀರು ಬಳಸದೆ ಬಟ್ಟೆ ತೊಳೆಯುವ ವಾಷಿಂಗ್ ಮೆಷಿನ್ ರೂ 24,990ರಿಂದ 27,990 ರೂಪಾಯಿಗಳ ಬೆಲೆಯಲ್ಲಿ ದೊರೆಯುತ್ತದೆ.

ಇಯಾನ್ ಇರ್ಗೋಜ್ ವಾಷಿಂಗ್ ಮೆಷಿನ್ ಬ್ರಾಂಡ್ ಅಡಿ ಓರೆನ್ ಕ್ಲೀನ್ ವಾಷಿಂಗ್ ಮೆಷಿನ್ ಎನ್ನುವ ಈ ವಾಷಿಂಗ್ ಮೆಷಿನ್ ಜೊತೆಗೆ ಟರ್ಬುಲೇಟರ್ ಮಾಡೆಲ್ ಕೂಡಾ ಬಿಡುಗಡೆ ಮಾಡಲಾಗಿದೆ. ಈ ಟರ್ಬುಲೆಟರ್ ಮಾಡೆಲ್ ವಾಷಿಂಗ್ ಮೆಷಿನ್‌ನಲ್ಲಿ ಕಡಿಮೆ ನೀರು ಹಾಗೂ ವಿದ್ಯುತ್ ಬಳಸಿ ಬಟ್ಟೆಯನ್ನು ಸ್ವಚ್ಛಗೊಳಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ