ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2011ರೊಳಗೆ ಇನ್ಫೋಸಿಸ್‌ಗೆ ಹೊಸ ಅಧ್ಯಕ್ಷ: ನಾರಾಯಣ ಮೂರ್ತಿ (Narayana Murthy | Infosys)
Bookmark and Share Feedback Print
 
ಆಗಸ್ಟ್ 2011ರಲ್ಲಿ ತಾನು ನಿವೃತ್ತಿ ಹೊಂದಲಿದ್ದು, ಅದಕ್ಕೂ ಮೊದಲು ಇನ್ಫೋಸಿಸ್‌ಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಇನ್ಫೋಸಿಸ್‌ನ ಹಾಲಿ ಅಧ್ಯಕ್ಷ ಹಾಗೂ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ತಿಳಿಸಿದ್ದಾರೆ.

ನಾರಾಯಣ ಮೂರ್ತಿ ಅವರಿಗೆ 65 ವರ್ಷಗಳು ತುಂಬಿದ್ದು, ಈ ಸಂಬಂಧ ಸಂಸ್ಥೆಯ ಮಂದಿನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮೂರ್ತಿ, ಅಧ್ಯಕ್ಷ ಅಭ್ಯರ್ಥಿಗಳ ಆಯ್ಕೆಗಾಗಿಯೇ ಜೆಫ್ರಿ ಲೇಮನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ನನ್ನ ನಿವೃತ್ತಿಯೊಳಗಾಗಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ನಂತರ ನಾನು ನಿವೃತ್ತಿಯಾಗುತ್ತೇನೆ ಎಂದು ತಿಳಿಸಿದ್ದಾರೆ.

ಐಸಿಐಸಿಔಐ ಬ್ಯಾಂಕಿನ ಕಾರ್ಯನಿವ್ರಾಹಕೇತರ ಅಧ್ಯಕ್ಷ ಕೆ.ವಿ.ಕಾಮತ್ ಸೇರಿದಂತೆ ಇನ್ನೂ ಇಬ್ಬರು ಪ್ರಮುಖರು ಈ ಆಯ್ಕೆ ಸಮಿತಿಯಲ್ಲಿದ್ದಾರೆ.

ಸಮಿತಿಯ ಮೂಲಕವೇ ಸೂಕ್ತ ಅಭ್ಯರ್ಥಿಯ ಆಯ್ಕೆ ನಡೆಯಲಿದ್ದು, ಇದರಿಂದ ಪ್ರತಿಭಾವಂತ, ದಕ್ಷ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. 2011ರ ಆಗಸ್ಟ್ 20ರೊಳಗಾಗಿ ಖಂಡಿತವಾಗಿಯೂ ಈ ಸಮಿತಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಮೂರ್ತಿ ತಿಳಿಸಿದರು.

1981ರಲ್ಲಿ ನಾರಾಯಣಮೂರ್ತಿ ಅವರು ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ಕೆ.ದಿನೇಶ್, ಎನ್.ಎಸ್.ರಾಘವನ್ ಹಾಗೂ ಎ.ಅರೋರಾ ಅವರ ಜೊತೆಗೂಡಿ ಇನ್ಫೋಸಿಸ್ ಸಂಸ್ಥೆಯನ್ನು ಹುಟ್ಟು ಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ