ಇದೀಗ ಹೋಂಡಾ ಮೋಟಾರ್ ಕಂಪನಿ ತನ್ನ ಅಕಾರ್ಡ್ ಹಾಗೂ ಸಿವಿಕ್ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ. ಕಾರಿನ ಇಗ್ನಿಶನ್ ಸ್ವಿಚ್ ಬಳಿಯಲ್ಲಿ ತೊಂದರೆಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.
ಇತ್ತೀಚೆಗಷ್ಟೇ ಹೋಂಡಾ ತನ್ನ 2003ನೇ ಮಾಡೆಲ್‌ನ 3,84,220 ಅಕಾರ್ಡ್ ಹಾಗೂ ಸಿವಿಕ್ ಕಾರುಗಳನ್ನು ಹಿಂಪಡೆದಿತ್ತು. ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷಾ ಮಂಡಳಿಯ ಅನುಸಾರ ಕೆಲವು ಮಾರ್ಪಾಡುಗಳನ್ನು ಮಾಡಬೇಕಿದ್ದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ಹಿಂಪಡೆಯಲಾಗಿತ್ತು.
ಆದರೆ ಇದೀಗ 1,97,000 ಅಕಾರ್ಡ್‌ಗಳು, 1,17,000 ಸಿವಿಕ್ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ತೀರ್ಮಾನಿಸಿದೆ. ಇಗ್ನಿಷನ್‌ನ ಕೆಲವು ತೊಂದರೆಗಳಿದ್ದ ಕಾರಣ ಈ ತೀರ್ಮಾನ ಮಾಡಲಾಗಿದೆ.