ಖ್ಯಾತ ರೀಟೈಲ್ ಸರಣಿಯಾದ ಶಾಪರ್ಸ್ ಸ್ಟಾಪ್ ಇದೀಗ ಮೆಟ್ರೋ ನಗರಗಳಾಚೆಗೂ ತನ್ನ ಮಳಿಗೆಗಳನ್ನು ವಿಸ್ತರಿಸಿಲು ತೀರ್ಮಾನಿಸಿದೆ.
ಅಹಮದಾಬಾದ್, ಔರಂಗಾಬಾದ್, ಜಲಂಧರ್, ಲುಧಿಯಾನಾ, ಮೈಸೂರು ಹಾಗೂ ವಿಜಯವಾಡಗಳಲ್ಲೂ ಇದೀಗ ಶಾಪರ್ಸ್ ಸ್ಟಾಪ್ ತಲೆಯೆತ್ತಲಿದೆ. ಇದಕ್ಕಾಗಿ ಈಗಾಗಲೇ 120 ಕೋಟಿ ರೂಪಾಯಿಗಳನ್ನು ಹೂಡಲಿದೆ.
ಶಾಪ್ ಸ್ಟಾಪ್ ವ್ಯವಸ್ಥಾಪಕ ನಿರ್ದೇಶಕ ಗೋವಿಂದ್ ಶ್ರೀಖಂಡೆ ಮಾತನಾಡುತ್ತಾ, ದೇಶದಲ್ಲಿಡೀ ಜಾಗತಿಕ ಆರ್ಥಿಕ ಕುಸಿತದ ಹೊಡೆತದಿಂದ ತತ್ತರಿಸುತ್ತಿದ್ದ ಸಂದರ್ಭವೂ ಕೂಡಾ ಶಾಪರ್ಸ್ ಸ್ಟಾಪ್ ಶೇ.20ರಷ್ಟು ಏರಿತ್ತು ಎಂದರು.
ಈಗಾಗಲೇ ದೇಶದ 14 ನಗರಗಳಲ್ಲಿ 33 ಮಳಿಗೆಗಳ್ನನು ಹೊಂದಿರುವ ಶಾಪರ್ ಸ್ಟಾಪ್ ಇದೀಗ ದೆಹಲಿಯಲ್ಲಿ ತನ್ನ ಏಳನೇ ಮಳಿಗೆಯನ್ನು ಆರಂಭಿಸಿದೆ.