ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಎದುರಿಗೆ ಇತರ ಮೌಲ್ಯಗಳ ಕುಸಿತದಿಂದಾಗಿ,ರೂಪಾಯಿ ಮೌಲ್ಯದಲ್ಲಿ 32ಪೈಸೆ ಕುಸಿತವಾಗಿ 47.02 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ 31ಪೈಸೆ ಕುಸಿತ ಕಂಡು 46.70/71ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ
ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ಏಷ್ಯಾ ಕರೆನ್ಸಿಗಳ ದುರ್ಬಲ ವಹಿವಾಟಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 155.41ಪಾಯಿಂಟ್‌ಗಳ ಏರಿಕೆಯಾಗಿ, 17,914.78 ಅಂಕಗಳಿಗೆ ತಲುಪಿದೆ.