ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ಕುಸಿತದಿಂದ ಆರ್ಥಿಕ ಒತ್ತಡದಲ್ಲಿ ಇಳಿಕೆ:ಆರ್‌ಬಿಐ (RBI | Inflation | Fall | Montek Singh Ahluwalia | Manmohan Singh)
Bookmark and Share Feedback Print
 
ಹಣದುಬ್ಬರ ದರ ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಗಿಂತ ವೇಗವಾಗಿ ಇಳಿಮುಖವಾಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ರೆಪೋ ದರಗಳನ್ನು ಹೆಚ್ಚಿಸುವ ಒತ್ತಡದಲ್ಲಿ ಕುಸಿತವಾಗಲಿದೆ ಎಂದು ಉನ್ನತ ಸರಕಾರಿ ಸಲಹೆಗಾರರು ತಿಳಿಸಿದ್ದಾರೆ.

ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಮಾತನಾಡಿ, ಜೂನ್ ತಿಂಗಳ ಅವಧಿಯಲ್ಲಿ ಶೇ.10.55ರಷ್ಟಿದ್ದ ಹಣದುಬ್ಬರ ದರ, ಮುಂಬರುವ ಡಿಸೆಂಬರ್ ವೇಳೆಗೆ ಶೇ.6ಕ್ಕೆ ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಮಾರ್ಚ್ ತಿಂಗಳ ಅವಧಿಯಿಂದ ರೆಪೋ ದರಗಳಲ್ಲಿ 100ರಿಂದ 125ರವರೆಗೆ ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ.

ಕಳೆದ ನಾಲ್ಕು ವಾರಗಳಲ್ಲಿ ಹಣದುಬ್ಬರ ದರ ನಿರಂತರವಾಗಿ ಇಳಿಕೆಯಾಗುತ್ತಿದೆ.ಆದ್ದರಿಂದ ಆರ್‌ಬಿಐ ಮೇಲಿನ ಒತ್ತಡ ಕೂಡಾ ಇಳಿಕೆಯಾಗುತ್ತಿದೆ ಎಂದು ಅಹ್ಲುವಾಲಿಯ ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗೌವರ್ನರ್ ಸುಬೀರ್ ಗೋಕರ್ಣ ಮಾತನಾಡಿ, ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಕಠಿಣ ಕ್ರಮಗಳನ್ನು ಅನುಸರಿಸಿದ್ದು, ಇದೀಗ ಹಣದುಬ್ಬರ ದರ ಇಳಿಕೆಯಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್, ಸೆಪ್ಟೆಂಬರ್ 16ರಂದು ಆರ್ಥಿಕ ಪರಿಷ್ಕರಣ ಸಭೆಯನ್ನು ನಡೆಸಲಿದೆ.ಆದರೆ, ಅಗತ್ಯವಾದಲ್ಲಿ ಯಾವುದೇ ಸಮಯದಲ್ಲಿ ಕೂಡಾ ಆರ್ಥಿಕ ಪರಿಷ್ಕರಣ ನಡೆಸುವ ಅಧಿಕಾರ ಹೊಂದಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ