ಕುಸಿದ ವಹಿವಾಟು : ಶೇ.7.1ಕ್ಕೆ ಇಳಿಕೆಯಾದ ಕೈಗಾರಿಕೆ ವೃದ್ಧಿ ದರ
ನವದೆಹಲಿ, ಗುರುವಾರ, 12 ಆಗಸ್ಟ್ 2010( 16:21 IST )
ಕಳೆದ ಎಂಟು ತಿಂಗಳುಗಳಿಂದ ಎರಡಂಕಿಗೆ ಚೇತರಿಕೆ ಕಂಡಿದ್ದ ಕೈಗಾರಿಕೆ ವೃದ್ಧಿ ದರ,ಜುಲೈ ತಿಂಗಳ ಅವಧಿಯಲ್ಲಿ ಶೇ.7.1ಕ್ಕೆ ಇಳಿಕೆಯಾಗಿ ಒಂದಂಕಿಗೆ ತಲುಪಿದೆ. ಕಳೆದ ವರ್ಷದ ಜೂನ್ ತಿಂಗಳ ಅವಧಿಯಲ್ಲಿ ಶೇ.8.3ರಷ್ಟಾಗಿತ್ತು ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ.
ಕೈಗಾರಿಕೆ ಉತ್ಪಾದನೆ ಸೂಚ್ಯಂಕದಲ್ಲಿ ಶೇ.80ರಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ಕ್ಷೇತ್ರ,ಕಳೆದ ವರ್ಷದ ಅವಧಿಯಲ್ಲಿದ್ದ ಶೇ.8ರಿಂದ ಪ್ರಸ್ತುತ ಶೇ.7.3ಕ್ಕೆ ಇಳಿಕೆಯಾಗಿದೆ
2009ರ ಜೂನ್ ತಿಂಗಳ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಶೇ.8ರಷ್ಟಿದ್ದು,ಇದೀಗ ಶೇ.3.5ರಷ್ಟು ವಿಸ್ತರಣೆಯಾಗಿದೆ.ಗಣಿಗಾರಿಕೆ ಕ್ಷೇತ್ರದಲ್ಲಿ ಶೇ.9.5ರಷ್ಟು ವೇಗವಾಗಿ ವೃದ್ಧಿಯಾಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ.
ಪ್ರಸಕ್ತ ತಿಂಗಳ ಅವಧಿಯಲ್ಲಿ ಗೃಹೋಪಕರಣ ಏಕಮಾತ್ರ ಕ್ಷೇತ್ರ ಶೇ.27.4ರಷ್ಟು ಚೇತರಿಕೆ ಕಂಡಿದೆ.ಕಳೆದ ವರ್ಷದ ಅವಧಿಯಲ್ಲಿ ಶೇ.16.2ಕ್ಕೆ ತಲುಪಿತ್ತು.
ಜೂನ್ ತಿಂಗಳ ಅವಧಿಯಲ್ಲಿ 17 ಕೈಗಾರಿಕೆ ಕ್ಷೇತ್ರಗಳಲ್ಲಿ 13 ಕೈಗಾರಿಕೆಗಳು ಲಾಭದತ್ತ ಮರಳಿವೆ ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ.
ಕೈಗಾರಿಕೆ ವೃದ್ಧಿ ದರ ಕುಸಿತದಿಂದಾಗಿ,ಹಣದುಬ್ಬರ ದರ ಹೆಚ್ಚಳವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಮತ್ತಷ್ಟು ಏರಿಕೆಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.