ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕ ವೃದ್ಧಿ ದರ ಶೇ.8.5ಕ್ಕೆ ತಲುಪುವ ನಿರೀಕ್ಷೆ:ಮೊಂಟೆಕ್ (Economy | IIP | Industrial growth | Planning Commission | Double digit)
Bookmark and Share Feedback Print
 
ಕೈಗಾರಿಕೆ ವೃದ್ಧಿ ದರ ಕುಸಿತದ ಮಧ್ಯೆಯು ದೇಶದ ಆರ್ಥಿಕ ವೃದ್ಧಿ ದರ ಶೇ.8.5ಕ್ಕೆ ತಲುಪುವ ನಿರೀಕ್ಷೆಗಳಿವೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ವೃದ್ಧಿ ದರ ಶೇ.8.5ಕ್ಕೆ ತಲುಪಲು ಕೈಗಾರಿಕೆ ವೃದ್ಧಿ ದರ ಎರಡಂಕಿಗೆ ತಲುಪಬೇಕು ಎನ್ನುವ ಅಗತ್ಯವಿಲ್ಲ. ಆದರೆ, ನಮಗೆ ಕೈಗಾರಿಕೆ ವೃದ್ಧಿ ದರ ಎರಡಂಕಿಗೆ ತಲುಪುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಉತ್ಪಾದನಾ ಕ್ಷೇತ್ರದ ಕುಸಿತದಿಂದಾಗಿ ಕೈಗಾರಿಕೆ ಉತ್ಪಾದನಾ ಸೂಚ್ಯಂಕ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜೂನ್ ತಿಂಗಳ ಅವಧಿಯಲ್ಲಿ ಶೇ.8.3ರಿಂದ ಶೇ.7.1ಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಕೂಡಾ ಜಿಡಿಪಿ ದರ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಆರ್ಥಿಕ ವರ್ಷಾಂತ್ಯಕ್ಕೆ ಶೇ.7.4ರಿಂದ ಶೇ.8.5ಕ್ಕೆ ಏರಿಕೆಯಾಗಲಿದೆ ಎಂದು ಸಮೀಕ್ಷಾ ವರದಿಯಲ್ಲಿ ಬಹಿರಂಗಪಡಿಸಿದೆ.

ಜೂನ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಅಲ್ಪಮಟ್ಟಿನ ಕುಸಿತ ಕಂಡಿದೆ. ಆದರೆ, ಮುಂಬರುವ ತಿಂಗಳುಗಳಲ್ಲಿ ಮತ್ತೆ ಚೇತರಿಕೆಯಾಗುವ ನಿರೀಕ್ಷೆಗಳಿವೆ ಎಂದು ಆಹ್ಲುವಾಲಿಯಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ