ಜಾಗತಿಕ ಸ್ಥಿರ ವಹಿವಾಟಿನ ಮಧ್ಯೆಯು ಹಬ್ಬದ ಸೀಜನ್ ಬೇಡಿಕೆಯನ್ನು ಪೂರೈಸಲು ಆಭರಣಗಳ ತಯಾರಕರು ಹಾಗೂ ಚಿನ್ನದ ಸಂಗ್ರಹಕಾರರಿಂದ ಚಿನ್ನ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ175 ರೂಪಾಯಿಗಳ ಏರಿಕೆಯಾಗಿ 18,600 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಬೆಳ್ಳಿಯ ದರ ಪ್ರತಿ ಕೆಜಿಗೆ 200 ರೂಪಾಯಿಗಳಷ್ಟು ಇಳಿಕೆಯಾಗಿ 29,100 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಆರ್ಥಿಕತೆ ಚೇತರಿಕೆಯ ಸಂಕೇತಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ, ಪ್ರತಿ ಔನ್ಸ್‌ಗೆ ಶೇ.0.3ರಷ್ಟು ಏರಿಕೆಯಾಗಿ 1,202.22 ಡಾಲರ್‌ಗಳಿಗೆ ತಲುಪಿದೆ.
ಬೆಳ್ಳಿಯ ನಾಣ್ಯಗಳ ದರ, (100 ನಾಣ್ಯಗಳಿಗೆ) 34,400 ರೂಪಾಯಿಗಳಿಗೆ ತಲುಪಿದ್ದು, ಹೆಚ್ಚಿನ ಕುಸಿತ ಕಂಡಿಲ್ಲವೆಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.