ಡಾಲರ್ ವಿರುದ್ಧ ಏಷ್ಯಾ ಕರೆನ್ಸಿಗಳ ಚೇತರಿಕೆ ಹಾಗೂ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳದಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 15 ಪೈಸೆ ಏರಿಕೆಯಾಗಿ 46.62 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ದುರ್ಬಲ ವಹಿವಾಟಿನ ಹಿನ್ನೆಲೆಯಲ್ಲಿ, ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 7ಪೈಸೆ ಕುಸಿತಗೊಂಡು 46.77/78 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 15 ಪೈಸೆ ಏರಿಕೆಯಾಗಿ 46.62 ರೂಪಾಯಿಗಳಿಗೆ ತಲುಪಿದೆ.
ಡಾಲರ್ ವಿರುದ್ಧ ಏಷ್ಯಾ ಕರೆನ್ಸಿಗಳ ಚೇತರಿಕೆ ಹಾಗೂ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳದಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 79.23 ಪಾಯಿಂಟ್‌ಗಳ ಏರಿಕೆ ಕಂಡು,18,153.13ಅಂಕಗಳಿಗೆ ತಲುಪಿದೆ.