ದಕ್ಷಿಣ ಕೊರಿಯಾ ಸ್ಯಾಂಗ್‌ಯಂಗ್ ಕಂಪೆನಿ ಖರೀದಿಸಿದ ಮಹೀಂದ್ರಾ
ಮುಂಬೈ, ಶುಕ್ರವಾರ, 13 ಆಗಸ್ಟ್ 2010( 16:37 IST )
ವಾಹನೋದ್ಯಮ, ಸಾಫ್ಟ್‌ವೇರ್ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳ ಕೈಗಾರಿಕೆಗಳಲ್ಲಿ ಅಗ್ರಸ್ಥಾನದಲ್ಲಿರುವ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿ, ದಕ್ಷಿಣ ಕೊರಿಯಾ ಮೂಲದ ವಾಹನೋದ್ಯಮ ಸಂಸ್ಥೆ ಸ್ಯಾಂಗ್‌ಯಂಗ್ ಕಂಪೆನಿಯನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.
2008ರ ಅವಧಿಯಲ್ಲಿ ಜಾಗ್ವಾರ್ ಆಂಡ್ ಲಾಂಡ್ ರೋವರ್ ಕಂಪೆನಿಯನ್ನು ಖರೀದಿಸುವ ಬಿಡ್‌ನಲ್ಲಿ ಟಾಟಾ ಮೋಟಾರ್ಸ್ ವಿರುದ್ಧ ಸೋಲನುಭವಿಸಿದ್ದ ಮಹೀಂದ್ರಾ, ಏಷ್ಯಾ-ಫೆಸಿಫಿಕ್, ಯುರೋಪ್, ಆಫ್ರಿಕಾ, ಮಧ್ಯಪ್ರಾಚ್ಯ ರಾಷ್ಟ್ರಗಳು, ದಕ್ಷಿಣ ಅಮೆರಿಕ ದೇಶಗಳಿಗೆ ವಾಹನಗಳನ್ನು ರಫ್ತು ಮಾಡುವ ಸ್ಯಾಂಗ್‌ಯಂಗ್ ಕಂಪೆನಿಯನ್ನು ಖರೀದಿಸುವಲ್ಲಿ ವಿಜಯ ಸಾಧಿಸಿದೆ.
ವಿಶ್ವ ವಾಹನೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾಲನ್ನು ಹೊಂದಿರುವ ಕೊರಿಯಾದ ಸ್ಯಾಂಗ್‌ಯಂಗ್ ಮತ್ತು ಭಾರತದ ಮಹೀಂದ್ರಾ ಕಂಪೆನಿಗಳು ಜಾಗತಿಕ ವಾಹನೋದ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಲಿವೆ ಎಂದು ಮಹೀಂದ್ರಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ 2009ರಲ್ಲಿ ಸ್ಯಾಂಗ್‌ಯಂಗ್ ಕಂಪೆನಿ ಬ್ಯಾಂಕ್ ದಿವಾಳಿತನವನ್ನು ಘೋಷಿಸಿತ್ತು. 2010ರ ಆರಂಭಿಕ ಏಳು ತಿಂಗಳುಗಳ ಅವಧಿಯಲ್ಲಿ 43,811 ವಾಹನಗಳನ್ನು ಮಾರಾಟ ಮಾಡಿತ್ತು.