ದೇಶಿಯ, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಸೇವಾ ತೆರಿಗೆ
ನವದೆಹಲಿ, ಶುಕ್ರವಾರ, 13 ಆಗಸ್ಟ್ 2010( 17:07 IST )
ದೇಶಿಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಸೇವಾ ತೆರಿಗೆಯನ್ನು ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ದೇಶಿಯ ವಿಮಾನ ಒಟ್ಟು ಟಿಕೆಟ್ ದರದಲ್ಲಿ ಶೇ.10ರಷ್ಟು ಅಥವಾ ಪ್ರತಿಯೊಂದು ಪ್ರಯಾಣಕ್ಕೆ 100 ರೂಪಾಯಿಗಳಷ್ಟು ಸೇವಾ ತೆರಿಗೆ ದರವನ್ನು ಸರಕಾರ ನಿಗದಿಪಡಿಸಿದೆ ಎಂದು ಸಚಿವ ಪಟೇಲ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಶೇ.10ರಷ್ಟು ಸೇವಾ ತೆರಿಗೆ ಅಥವಾ 500 ರೂಪಾಯಿಗಳ ಸೇವಾ ತೆರಿಗೆಯನ್ನು ವಿಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಟೇಲ್, ಲೋಕಸಭೆಯಲ್ಲಿ ವಿವರಣೆ ನೀಡಿದ್ದಾರೆ.
ಏತನ್ಮಧ್ಯೆ, ಆಸ್ಸಾಂ, ಮೇಘಾಲಯ, ಮಣಿಪುರ, ಮೀಜೋರಾಂ, ತ್ರಿಪುರ, ನಾಗಾಲ್ಯಾಂಡ್ ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಬಾಘ್‌ಡೋರಾ ವಿಮಾನ ನಿಲ್ದಾಣಗಳಿಂದ ಪ್ರವಾಸ ಮಾಡುವ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.