ಹಣದುಬ್ಬರ ದರ ಏರಿಕೆಯ ಮಧ್ಯೆಯು, ದ್ವಿದಳ ಧಾನ್ಯ ,ಖಾದ್ಯ ತೈಲ, ಹಾಲು ಮತ್ತು ತರಕಾರಿ ದರಗಳಲ್ಲಿ ಕಳೆದ ಆರು ತಿಂಗಳುಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಉದ್ದು, ತೊಗರಿಬೇಳೆ,ಖಾದ್ಯ ತೈಲ, ವನಸ್ಪತಿ, ಹಾಲು ಮತ್ತು ಆಲೂಗಡ್ಡೆ ದರಗಳು ಸುಮಾರು ಆರು ತಿಂಗಳುಗಳಿಂದ ನಿರಂತರವಾಗಿ ಹೆಚ್ಚಳವಾಗಿವೆ ಎಂದು ಪವಾರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವ ಪವಾರ್,ಅಹಾರ ಹಣದುಬ್ಬರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳ್ನು ಸರಕಾರ ಕೈಗೊಂಡಿದೆ.ಮುಂಬರುವ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಇಳಿಮುಖವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಸರಕಾರ ತೆಗೆದುಕೊಂಡ ಹಲವಾರು ಕ್ರಮಗಳನ್ನು ತೆಗೆದುಕೊಂಡ ನಂತರವೂ, ಸುಮಾರು ಎರಡು ವಾರಗಳ ಇಳಿಕೆ ಕಂಡು ಜೂನ್ 31ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಮತ್ತೆ ಶೇ.11.4ಕ್ಕೆ ಏರಿಕೆಯಾಗಿದೆ.
ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಉದ್ದು ಮತ್ತು ತೊಗರಿ ಬೇಳೆಯ ದರಗಳಲ್ಲಿ ಪ್ರತಿ ಕೆಜಿಗೆ 3 ರೂಪಾಯಿ ಹೆಚ್ಚಳವಾಗಿ ಕ್ರಮವಾಗಿ 70 ಮತ್ತು 80 ರೂಪಾಯಿಗಳಿಗೆ ತಲುಪಿದೆ ಎಂದು ಕೇಂದ್ರ ಆಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.