ದೇಶದ ಗೃಹಸಾಲ ನೀಡಿಕೆಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್,ವಾಹನೋದ್ಯಮ ಸಾಲದ ಬಡ್ಡಿ ದರದಲ್ಲಿ ಶೇ.0.5ರಷ್ಟು ಏರಿಕೆ ಮಾಡಿದ್ದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಿದ್ದರಿಂದ, ಅನಿವಾರ್ಯವಾಗಿ ವಾಹನೋದ್ಯಮ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.0.5ರಷ್ಟು ಏರಿಕೆಯಾಗುತ್ತಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ಉಪಾಧ್ಯಕ್ಷ ಅಶೋಕ್ ಖನ್ನಾ ಹೇಳಿದ್ದಾರೆ.
ಕೊಟಾಕ್ ಮಹೀಂದ್ರಾ ಬ್ಯಾಂಕ್ ಕೂಡಾ ಸಾಲದ ಮೇಲಿನ ಬಡ್ಡಿ ದರದಲ್ಲಿ ಏರಿಕೆ ಮಾಡಲು, ಒತ್ತಡದ ಅನಿವಾರ್ಯತೆಗಳು ಎದುರಾಗಿವೆ. ಆದರೆ ಸಂಪೂರ್ಣ ನಿರ್ಧಾರವಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.0.5ರಷ್ಟು ಅನಿವಾರ್ಯತೆಗಳು ಎದುರಾಗಿವೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಕೆ.ವಿಎಸ್.ಮಣಿಯನ್ ಹೇಳಿದ್ದಾರೆ.