ದೇಶದ ಕಾರು ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಝಕಿ ಇಂಡಿಯಾ,ಸಿಎನ್‌ಜಿ ಮಾದರಿಯ ಐದು ಮಾಡೆಲ್‌ಗಳ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಸಿಎನ್‌ಜಿ ಮಾದರಿಯ ಎಸ್‌ಎಕ್ಸ್4, ಎಕೊ, ವಾಗ್ನಾರ್, ಎಸ್ಟಿಲೊ ಮತ್ತು ಅಲ್ಟೋ ಕಾರುಗಳನ್ನು ಬಿಡುಗಡೆ ಮಾಡಲಾಗಿದೆ.
ಅಲ್ಟೋಎಲ್‌ಎಕ್ಸ್‌ಐ 3.23 ಲಕ್ಷ , ಎಕೊ 3.64ಲಕ್ಷ , ವಾಗ್ನಾರ್ 4.11 ಲಕ್ಷ ರೂ,ಎಸ್‌ಎಕ್ಸ್4 7.47ಲಕ್ಷ ರೂಪಾಯಿ, ಎಸ್ಟಿಲೊ 4.05ಲಕ್ಷ ರೂಪಾಯಿ(ಶೋರೂಂ ದರ ಹೊರತುಪಡಿಸಿ)ಗಳ ದರವನ್ನು ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.